ಮೊದಲ ರಾತ್ರಿ ಸೆಕ್ಸ್ ಗೆ ಮಹಿಳೆಯರು ಹಿಂಜರಿಯುವುದು ಯಾಕೆ ಗೊತ್ತಾ?
ಭಾನುವಾರ, 17 ಜೂನ್ 2018 (07:37 IST)
ಬೆಂಗಳೂರು: ಮೊದಲ ರಾತ್ರಿಯೇ ಗಂಡನ ಎದುರು ಮೈದೆರೆದು ನಿಲ್ಲಲು ಹೆಚ್ಚಾಗಿ ಭಾರತೀಯ ಮಹಿಳೆಯರು ಇಷ್ಟಪಡುವುದಿಲ್ಲ. ಅದಕ್ಕೆ ಹಲವು ವಿಚಾರಗಳು ಕಾರಣಗಳಾಗುತ್ತವೆ.
ಸುಸ್ತು
ಭಾರತೀಯ ಮದುವೆಗಳೇ ಹಾಗೆ. ತುಂಬಾ ಶಾಸ್ತ್ರಗಳು, ಸಮಯ, ನೆಂಟರು ಎಲ್ಲರ ನಡುವೆ ಹೈರಾಣಾಗಿರುತ್ತಾರೆ. ಹೀಗಾಗಿ ಮೊದಲ ರಾತ್ರಿಯ ಶಾಸ್ತ್ರದ ದಿನ ಸೆಕ್ಸ್ ಬೇಕೆನಿಸದು.
ಪರಿಚಿತನಾಗಬೇಕು
ಭಾರತೀಯ ಮಹಿಳೆಯರು ಮದುವೆಗೆ ಮೊದಲು ಗಂಡನಾಗುವವನ ಜತೆ ಎಷ್ಟೇ ಸುತ್ತಾಡಿದರೂ ಸೆಕ್ಸ್ ವಿಚಾರದಲ್ಲಿ ಮಡಿವಂತಿಕೆ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಮೊದಲು ಆತನ ಜತೆ ಅಡ್ಜಸ್ಟ್ ಆಗಲು ಇಷ್ಟಪಡುತ್ತಾರೆ.
ಹೋಂ ಸಿಕ್ ನೆಸ್
ಆಗಷ್ಟೇ ಪತಿಯ ಮನೆ ಸೇರಿದ ಆತಂಕ, ಹೆತ್ತವರಿಂದ ದೂರ ಬಂದ ಸಂಕಟ ಎಲ್ಲಾ ಇರುವಾಗ ಲೈಂಗಿಕ ಬಯಕೆಗಳು ಬರಲು ಹೇಗೆ ಸಾಧ್ಯ?
ಗರ್ಭನಿರೋಧಕ
ಮದುವೆಗೆ ಮೊದಲು ಗರ್ಭನಿರೋಧಕ ವಿಚಾರಗಳ ಬಗ್ಗೆ ಮಾತನಾಡಿರದೇ ಇದ್ದರೆ, ಮೊದಲ ರಾತ್ರಿಯೇ ಸುರಕ್ಷತೆಯಿಲ್ಲದೇ ಸೆಕ್ಸ್ ಮಾಡಲು ಆತಂಕವಿದ್ದೇ ಇರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.