ಬೆಂಗಳೂರು: ಸೆಕ್ಸ್ ನಮ್ಮ ಮನಸ್ಸು ಮತ್ತು ದೇಹದ ಸಂತೋಷಕ್ಕೆ ಒಳ್ಳೆಯದು ಎನ್ನುವುದು ನಿಜ. ಆದರೆ ಕೆಲವು ಸಂದರ್ಭಗಳಲ್ಲಿ ಸೆಕ್ಸ್ ಗೆ ನೋ ಹೇಳುವುದೂ ಒಳ್ಳೆಯದೇ! ಅವು ಯಾವುವು ನೋಡೋಣ.
ಸೋಂಕು ಇದ್ದಾಗ
ಕೆಲವೊಮ್ಮೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕಿನ ಖಾಯಿಲೆ ಇದ್ದಾಗ ಸೆಕ್ಸ್ ಮಾಡದಿರುವುದೇ ಒಳ್ಳೆಯದು. ಅದರಲ್ಲೂ ವಿಶೇಷವಾಗಿ ಜನನಾಂಗದ ಸೋಂಕಿದ್ದಾಗ ಸೆಕ್ಸ್ ಮಾಡದಿರುವುದೇ ಸುರಕ್ಷಿತ.
ನೋವಿದ್ದಾಗ
ಸೆಕ್ಸ್ ಮಾಡುವುದರಿಂದ ತಲೆನೋವಿನಂತಹ ಸಣ್ಣ ಪುಟ್ಟ ನೋವು ಕಡಿಮೆಯಾಗುವುದು ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಆದರೆ ತುರಿಕೆಯಿಂದ ಕೂಡಿದ ನೋವುಗಳಿದ್ದಾಗ ಸೆಕ್ಸ್ ಮಾಡಬೇಡಿ.
ಸುರಕ್ಷೆಯಿಲ್ಲದೇ ಇದ್ದಾಗ
ಕೆಲವೊಮ್ಮೆ ಸುರಕ್ಷಿತ ಲೈಂಗಿಕ ಕ್ರಿಯೆಗೆ ಬೇಕಾದ ಕಾಂಡೋಮ್ ನಂತಹ ವಸ್ತು ಬಳಸುವುದನ್ನು ಮರೆತಿರುತ್ತೀರಿ. ಅಂತಹ ಸಂದರ್ಭದಲ್ಲಿ ಸೆಕ್ಸ್ ಬೇಡ.
ಇಷ್ಟವಿಲ್ಲದೇ ಇದ್ದಾಗ
ಲೈಂಗಿಕ ಕ್ರಿಯೆ ಸುಗಮವಾಗಬೇಕಾದರೆ ಇಬ್ಬರೂ ಮೂಡ್ ನಲ್ಲಿರಬೇಕು. ಯಾಂತ್ರಿಕವಾದರೆ ಇಬ್ಬರಿಗೂ ಸುಖ ಸಿಗದು ಎನ್ನುವುದನ್ನು ಮರೆಯಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.