ಋತುಚಕ್ರದ ವೇಳೆ ಕಾಟನ್ ಪ್ಯಾಡ್ ಬಳಕೆ ಉತ್ತಮ ಯಾಕೆ?

ಶನಿವಾರ, 4 ಡಿಸೆಂಬರ್ 2021 (08:45 IST)
ಬೆಂಗಳೂರು: ಮಹಿಳೆಯರಿಗೆ ಋತುಚಕ್ರದ ವೇಳೆ ಗುಪ್ತಾಂಗದ ಶುಚಿತ್ವದ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸಬೇಕಾಗುತ್ತದೆ. ಸರಿಯಾದ ಪ್ಯಾಡ್ ಬಳಕೆ ಮಾಡುವುದು, ಶುಚಿತ್ವ ಕಾಪಾಡುವುದು ಆರೋಗ್ಯಕರ ಋತುಚಕ್ರಕ್ಕೆ ದಾರಿಯಾಗಿದೆ.

ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಯಾವುದೋ ಒಂದು ಪ್ಯಾಡ್ ಬಳಸಿಕೊಳ್ಳುತ್ತೇವೆ. ಆದರೆ ಕೆಲವರಿಗೆ ಇದರಿಂದ ತುರಿಕೆ, ಕಿರಿ ಕಿರಿ ಅನುಭವವಾಗಬಹುದು.

ಅದಕ್ಕಾಗಿ ಕಾಟನ್ ಪ್ಯಾಡ್ ಬಳಕೆ ಸೂಕ್ತ. ಕಾಟನ್ ಪ್ಯಾಡ್ ಬಳಸುವುದರಿಂದ ಗುಪ್ತಾಂಗದಲ್ಲಿ ತುರಿಕೆ, ಕಿರಿ ಕಿರಿಯಾಗುವುದನ್ನು ತಪ್ಪಿಸಬಹುದು. ಕಾಟನ್ ಪ್ಯಾಡ್ ಹೆಚ್ಚು ಸುರಕ್ಷಿತ ಮತ್ತು ಹಿತಕಾರಿ ಕೂಡಾ. ಮತ್ತು ಕಾಟನ್ ಪ್ಯಾಡ್ ಗಳು ಹೆಚ್ಚು ಹೀರಿಕೊಳ್ಳುವ ಗುಣ ಹೊಂದಿರುತ್ತದೆ. ಹೀಗಾಗಿ ಹೊರಗಡೆ ಓಡಾಡುವಾಗ ನಿಮಗೆ ಅನುಕೂಲಕಾರಿಯಾಗಿರುತ್ತದೆ. ಕಾಟನ್ ‍ಪ್ಯಾಡ್ ತಯಾರಿಕೆಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ. ಹೀಗಾಗಿ ಇದು ಆರೋಗ್ಯಕರವೂ ಆಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ