ಚಳಿಗಾಲ ಮನಸ್ಸಿಗೆ ಮುದ ಕೊಟ್ಟರೂ ಹೃದಯಕ್ಕೆ ಒಳ್ಳೆಯದಲ್ಲ!

ಶನಿವಾರ, 21 ಜನವರಿ 2017 (11:06 IST)
ಬೆಂಗಳೂರು: ಚುಮು ಚುಮು ಚಳಿಗಾಲ ಎಂದರೆ ಎಲ್ಲರಿಗೂ ಇಷ್ಟ. ಬೇಸಿಗೆಯಂತೆ ಬೆವರು ಸುರಿಸಬೇಕಿಲ್ಲ. ಬೆಚ್ಚನೆ ಬೆಡ್ ಶೀಟ್ ನೊಳಗೆ ಹೊದ್ದು ಮಲಗಿದರೆ ಅದರ ಸುಖವೇ ಬೇರೆ. ಇಂತಹಾ ಮನಸ್ಸಿಗೆ ಮುದ ಕೊಡುವ ಚಳಿಗಾಲ ಹೃದಯಕ್ಕೆ ತೊಂದರೆ ಉಂಟುಮಾಡಬಹುದು.
 

ಆಗಾಗ  ಉಷ್ಣತೆ ಹೆಚ್ಚು ಕಮ್ಮಿಯಾಗುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಈ ಮೊದಲೇ ಹೃದಯದ ಖಾಯಿಲೆ ಇದ್ದವರು, ಮಧುಮೇಹಿಗಳು ಹಾಗೂ ಇನ್ನಿತರ ಮಾರಕ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಕಾಲದಲ್ಲಿ ಹೃದಯಾಘಾತವಾಗುವ ಸಂಭವ ಹೆಚ್ಚಿದೆಯಂತೆ.

ಚಳಿಗಾಲದಲ್ಲಿ ರಕ್ತದೊತ್ತಡ ಏರುವುದು. ಇದರಿಂದ ಹೃದಯಕ್ಕೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಇದು ರಕ್ತವನ್ನು ಬಿಸಿಯೇರಿಸಲು ಹೃದಯಕ್ಕೆ ಹೆಚ್ಚು ಕೆಲಸ ಕೊಡುತ್ತದೆ. ಅಲ್ಲದೆ ಚಳಿಗಾಲದಲ್ಲಿ ನಾವು ದೇಹಕ್ಕೆ ಚಟುವಟಿಕೆ ಕಡಿಮೆ, ಜಾಸ್ತಿ ನೀರು ಕುಡಿಯುವುದಿಲ್ಲ ಈ ಎಲ್ಲಾ ಅಂಶಗಳು ಹೃದಯದ ಆರೋಗ್ಯಕ್ಕೆ ಮಾರಕ ಎನ್ನಲಾಗಿದೆ.

ಹೀಗಾಗಿ ಚಳಿಗಾಲದಲ್ಲಿ ಆದಷ್ಟು ಮುದುಡಿ ಕೂರುವ ಬದಲು, ದೇಹಕ್ಕೆ ಚಟುವಟಿಕೆ ಒದಗಿಸುವುದು, ದ್ರವಾಹಾರ ತೆಗೆದುಕೊಳ್ಳುತ್ತಲೇ ಇರುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬುದು ತಜ್ಞರ ಅಭಿಮತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ