ಬೆಂಗಳೂರು: ಗರ್ಭಿಣಿಯಾಗಲು ಬಯಸುವ ಮಹಿಳೆಯರು ಕೆಲವೊಂದು ಆಹಾರಗಳನ್ನು ತಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ಬಾಳೆಹಣ್ಣು
ಇದರಲ್ಲಿ ಪೊಟೇಷಿಯಂ ಅಂಶ ಹೆಚ್ಚಿದ್ದು, ಫಲವಂತಿಕೆ ಹೆಚ್ಚಿಸುತ್ತದೆ. ಅಲ್ಲದೆ ಲೈಂಗಿಕ ಆಸಕ್ತಿಯನ್ನೂ ಹೆಚ್ಚಿಸುತ್ತದೆ.
ಬೇಳೆ ಕಾಳುಗಳು
ಬೇಳೆ ಕಾಳುಗಳಲ್ಲಿರುವ ಪೋಷಕಾಂಶಗಳು ಮಹಿಳೆಯರಲ್ಲಿ ಫಲವಂತಿಕೆ ಹೆಚ್ಚಿಸಿ ಲೈಂಗಿಕಾಸಕ್ತಿಯನ್ನೂ ದ್ವಿಗುಣಗೊಳಿಸುತ್ತದೆ.
ಸೊಪ್ಪು ತರಕಾರಿಗಳು
ವಿಟಮಿನ್ ಬಿ ಅಂಶ ಹೇರಳವಾಗಿರುವ ಸೊಪ್ಪು ತರಕಾರಿಗಳು ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿಯನ್ನು ಸುಗಮಗೊಳಿಸುತ್ತದೆ.
ಚೆರ್ರಿ ಮತ್ತು ಬೆರ್ರಿ!
ಸ್ಟ್ರಾಬೆರಿ, ಬ್ಲ್ಯಾಕ್ ಬೆರ್ರಿಯಂತಹ ಹಣ್ಣುಗಳು ಮಹಿಳೆಯರಲ್ಲಿ ಅಂಡಾಣುವಿನ ಆಯಸ್ಸು ಹೆಚ್ಚಿಸುವುದಲ್ಲದೆ, ಅವುಗಳ ಆರೋಗ್ಯ ಕಾಪಾಡುತ್ತದೆ. ಇದರಿಂದ ಗರ್ಭಿಣಿಯಾಗುವುದು ಸುಲಭ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.