ನಿದ್ದೆ ಬಾರದಿದ್ದರೆ ಈ ಆಹಾರ ಸೇವಿಸಿ

ಮಂಗಳವಾರ, 2 ಮೇ 2017 (10:42 IST)
ಬೆಂಗಳೂರು: ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತೀರಾ? ಹಗಲು ನಿದ್ದೆಯ ಕೊರತೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಾದರೆ ಈ ಆಹಾರ ಸೇವಿಸಿ ನೋಡಿ.

 
ಬಾಳೆಹಣ್ಣು
ಬಾಳೆಹಣ್ಣನ್ನು ಸಮಾನ್ಯವಾಗಿ ನಾವೆಲ್ಲರೂ ಸೇವಿಸುತ್ತೇವೆ. ಬಾಳೆಹಣ್ಣಿನಲ್ಲಿ ಪೊಟೇಷಿಯಂ ಅಂಶ ಹೆಚ್ಚಿದೆ. ಪೊಟೇಷಿಯಂ ಅಂಶ ನಮ್ಮ ಕೈ ಕಾಲು ಸೆಳೆತ ಮುಂತಾದ ಸಮಸ್ಯೆಗಳನ್ನು ಶಾಂತಗೊಳಿಸುತ್ತದೆ. ಇದರಿಂದ ಸುಖ ನಿದ್ದೆ ನಮ್ಮದಾಗುತ್ತದೆ.

ಜೇನುತುಪ್ಪ
ಜೇನುತುಪ್ಪದಲ್ಲಿರುವ ನೈಸರ್ಗಿಕ ಸಕ್ಕರೆ ನಮ್ಮ ದೇಹಕ್ಕೆ ಇನ್ಸುಲಿನ್ ನೀಡುತ್ತದೆ. ಇದು ಸ್ವಲ್ಪ ಮಟ್ಟಿಗೆ ನಮ್ಮ ಮೆದುಳಿಗೆ ಮತ್ತೇರಿಸುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ಚಿಂತೆ ಮರೆತು ನಿದ್ದೆ ಮಾಡಬಹುದು.

ಕೊಬ್ಬರಿ ಎಣ್ಣೆ
ರಾತ್ರಿ ಮಲಗುವ ಮೊದಲು ತಲೆ ಕೂದಲುಗಳಿಗೆ ಹದವಾಗಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ನಂತರ ಮಲಗಿ. ಸುಕ ನಿದ್ದೆ ನಮ್ಮದಾಗುವುದು. ನೆನಪಿಡಿ. ಕೊಬ್ಬರಿ ಎಣ್ಣೆ ಹೆಚ್ಚು ಬಳಸಿದರೆ ಅದುವೇ ನಿದ್ದೆ  ಹಾಳಾಗುವುದಕ್ಕೂ ಕಾರಣವಾಗಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ