ಜೀವನದ ಸಂತೋಷ ವೃದ್ಧಿಗೆ ಟಿಪ್ಸ್

ಮಂಗಳವಾರ, 22 ಜನವರಿ 2008 (20:53 IST)
1) ಸದಾ ಸಕಾರಾತ್ಮಕವಾಗಿ ಯೋಚಿಸಿ. ನಿಮ್ಮ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳು ಆವರಿಸಲು ಅವಕಾಶ ಕೊಡಬೇಡಿ.

2)ಪರಿಹಾರಗಳಿಗೆ ಯೋಚಿಸಿ, ಸಮಸ್ಯೆಗಳ ಬಗ್ಗೆ ಚಿಂತಿಸುತ್ತಾ ಕುಳಿತುಕೊಳ್ಳಬೇಡಿ.

3)ಸುಶ್ರಾವ್ಯ ಸಂಗೀತ ಮನಸ್ಸಿಗೆ ಹಿತ ನೀಡುತ್ತದೆ.

4) ನಿಮ್ಮನ್ನು ನಗಿಸುವ ಕಾಮೆಡಿ ಚಿತ್ರಗಳನ್ನು ವೀಕ್ಷಿಸಿ.

5) ಪ್ರತಿ ದಿನ ಯಾವುದಾದರೂ ಸ್ಫೂರ್ತಿದಾಯಕ ಪುಸ್ತಕ ಅಥವಾ ಲೇಖನದ ಕೆಲವು ಪುಟಗಳನ್ನು ಓದಿ.

6) ನೀವು ಏನು ಮಾಡಿದ್ದೀರೆಂಬುದನ್ನು ಯೋಚಿಸಿ, ಏನು ಮಾಡಿಲ್ಲವೆಂಬುದನ್ನು ಯೋಚಿಸಬೇಡಿ. ಕೆಲವು ಬಾರಿ ನೀವು ಎಣಿಸಿದ್ದು ಆಗದಿದ್ದರೆ ನಿರಾಶೆ, ಹತಾಶೆಯಾಗಬಹುದು.

7) ಪ್ರತಿದಿನ ಒಳ್ಳೆಯದನ್ನೇ ಮಾಡಿ. ಪುಸ್ತಕ ಖರೀದಿ,ನೆಚ್ಚಿನ ಆಹಾರ ಸೇವಿಸುವುದು, ಟಿವಿಯಲ್ಲಿ ನಿಮ್ಮ ಮೆಚ್ಚಿನ ಕಾರ್ಯಕ್ರಮ ವೀಕ್ಷಣೆ ಅಥವಾ ಸಮುದ್ರ ಕಿನಾರೆಯಲ್ಲಿ ಕಾಲಕಳೆಯುವುದು.

8) ಪ್ರತಿ ದಿನ ಇತರರಿಗೆ ಮೆಚ್ಚಿಗೆಯಾಗುವ ಒಂದು ಕೆಲಸವನ್ನಾದರೂ ಮಾಡಿ. ಹಿತವಾದ ನುಡಿ, ಸಹೋದ್ಯೋಗಿಗಳಿಗೆ ನೆರವು, ಕ್ರಾಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ನೀಡುವುದು, ವೃದ್ಧರಿಗೆ ಬಸ್ಸಿನಲ್ಲಿ ಸೀಟು ಬಿಟ್ಟುಕೊಡುವುದು, ನಿಮ್ಮ ಪ್ರೀತಿಪಾತ್ರರಿಗೆ ಸಣ್ಣ ಬಹುಮಾನ ಕೊಡುವುದು. ನೀವು ಬೇರೆಯವರನ್ನು ಸಂತೋಷಪಡಿಸಿದರೆ ಜನರು ನಿಮ್ಮನ್ನು ಸಂತೋಷಪಡಿಸುತ್ತಾರೆ.

9) ಸಂತೋಷವಾಗಿರುವವರನ್ನು ನೋಡಿ ಅಸೂಯೆ ಪಡಬೇಡಿ. ಅವರ ಸಂತೋಷ ಕಂಡು ಸಂತೋಷಪಡಿ.

ವೆಬ್ದುನಿಯಾವನ್ನು ಓದಿ