ಇತಿಹಾಸ ಜ್ಞಾನ ಪರೀಕ್ಷಿಸಿಕೊಳ್ಳಲು ಕ್ವಿಜ್

ND
1. ಕ್ವಿಟ್ ಇಂಡಿಯಾ ಚಳವಳಿ ನಡೆದ ದಿನ ಯಾವುದು?
a) 2 ಆಗಸ್ಟ್, 1948, b) 2 ಆಗಸ್ಟ್ 1942 c) 8 ಆಗಸ್ಟ್, 1942 d) 8 ಆಗಸ್ಟ್, 1942

2. 1932ರ ಮಾರ್ಚ್ 12ರಂದು ಉಪ್ಪಿನ ಸತ್ಯಾಗ್ರಹಕ್ಕೆ ಹೇತುವಾದ ದಂಡಿ ಯಾತ್ರೆ ಆರಂಭವಾಗಿದ್ದು ಎಲ್ಲಿಂದ?
a) ಆನಂದಭವನ b) ಸಾಬರಮತಿ ಆಶ್ರಮ c) ದಂಡಿ d) ಪೋರಬಂದರ್

3. ಬ್ರಿಟಿಷರಿಂದ ದೀರ್ಘಕಾಲ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ವೀರ ಯಾರು?
a) ಮಂಗಲ್ ಪಾಂಡೆ b) ಮಹಾತ್ಮಾ ಗಾಂಧೀಜಿ c) ವೀರ ಸಾವರ್ಕರ್ d) ಭಗತ್ ಸಿಂಗ್

4. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಹೇಳಲಾದ ಸಿಪಾಯಿ ದಂಗೆ ನಡೆದಿದ್ದು ಯಾವ ಇಸವಿಯಲ್ಲಿ?
a) 1857 b) 1842 c) 1867 d) 1847

5. ಭಾರತದ ಕೊನೆಯ ವೈಸ್‌ರಾಯ್ ಆಗಿದ್ದವರು ಯಾರು?
a) ವಾರನ್ ಹೇಸ್ಟಿಂಗ್ಸ್ b) ಲಾರ್ಡ್ ಮೌಂಟ್ ಬ್ಯಾಟನ್ c) ಡಾಲ್‌ಹೌಸಿ d) ಲಾರ್ಡ್ ವಿಲಿಯಂ ಬೆಂಟಿಕ್

6. ಗಾಂಧೀಜಿ ಅವರು ಮೊದಲನೇ ಮಹಾಯುದ್ಧದ ಸಂದರ್ಭ ಯಾರ ಪರವಾಗಿ ಕೆಲಸ ಮಾಡಿದ್ದರು?
a) ಜರ್ಮನ್ನರು b) ಬ್ರಿಟಿಷರು c) ಅಮೆರಿಕನ್ನರು d) ಜಪಾನೀಯರು

7. ಸಾವಿನಲ್ಲೂ ತಾನು "ಸ್ವತಂತ್ರ" ಎನ್ನುತ್ತಾ ಬ್ರಿಟಿಷರ ಕೈಗೆ ಸಿಗದೆ ವೀರಮರಣವನ್ನಪ್ಪಿದ ಕ್ರಾಂತಿಕಾರಿ ನಾಯಕ ಯಾರು?
a) ಭಗತ್ ಸಿಂಗ್ b) ಸಾವರ್ಕರ್ c) ಚಂದ್ರಶೇಖರ ಆಜಾದ್ d) ಸುಖದೇವ್

8. 1947ರಲ್ಲಿ ಸ್ವಾತಂತ್ರ್ಯ ಪಡೆದರೂ ಭಾರತವು ಪೂರ್ಣರೂಪದಲ್ಲಿ ಸ್ವಯಂ ಅಧಿಕಾರ ಪಡೆದದ್ದು ಯಾವಾಗ?
a) 1948 b) 1949 c) 1950 d) 1952

9. ಈಸ್ಟ್ ಇಂಡಿಯಾ ಕಂಪನಿಯನ್ನು ಬ್ರಿಟಿಷ್ ಆಡಳಿತವು ವಿಸರ್ಜಿಸಿದ ಇಸವಿ ಯಾವುದು?
a) 1857 b) 1877 c) 1874 d) 1875

10. ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ, ಸ್ವಾತಂತ್ರ್ಯ ಗಳಿಕೆಗೆ ತಳಪಾಯ ಹಾಕಿಕೊಟ್ಟ ಮೇಧಾವಿ ಯುವ ನಾಯಕ ಯಾರು?
a) ರಾಜಾರಾಮ ಮೋಹನ ರಾಯ್ b) ಲಾಲ್ ಬಹಾದೂರ್ ಶಾಸ್ತ್ರಿ c) ಮಹಾತ್ಮಾ ಗಾಂಧೀಜಿ d) ಸುಭಾಷ್‌ಚಂದ್ರ ಬೋಸ್

ಉತ್ತರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಕ್ವಿಜ್ ಉತ್ತರಗಳು:

1. d) 8 ಆಗಸ್ಟ್, 1942

2. b) ಸಾಬರಮತಿ ಆಶ್ರಮ

3. c) ವೀರ ಸಾವರ್ಕರ್

4. a) 1857

5. b) ಲಾರ್ಡ್ ಮೌಂಟ್ ಬ್ಯಾಟನ್

6. b) ಬ್ರಿಟಿಷರು

7. c) ಚಂದ್ರಶೇಖರ ಆಜಾದ್

8. c) 1950

9. c) 1874

10. d) ಸುಭಾಷ್‌ಚಂದ್ರ ಬೋಸ್

ವೆಬ್ದುನಿಯಾವನ್ನು ಓದಿ