ಶಾಂತಿ ಕ್ರಾಂತಿ : ಬಟುಕೇಶ್ವರ್ ದತ್

ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ್ ದತ್ ಹೆಸರು ಅವರ ಒಡನಾಡಿಗಳಾಗಿದ್ದ ಭಗತ್ ಸಿಂಗ್, ಚಂದ್ರ ಶೇಖರ್ ಅಜಾದ್, ರಾಜ್‌ಗುರು ಅವರ ಹೆಸರುಗಳೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಕಾರಣ, 1929ರ ಏಪ್ರಿಲ್‌ನಲ್ಲಿ ಭಗತ್ ಸಿಂಗ್ ಒಡಗೂಡಿ ಪಂಜಾಬ್ ಅಸೆಂಬ್ಲಿಗೆ ಹಾಕಿದ ಬಾಂಬ್. ಇದಕ್ಕಾಗಿ ಬಂಧನಕ್ಕೊಳಗಾದ ನಂತರ, ದತ್ ಹಾಗೂ ಸಿಂಗ್ ಇಬ್ಬರೂ ಭಾರತೀಯ ರಾಜಕೀಯ ಕೈದಿಗಳ ಹಕ್ಕುಗಳು ಹಾಗೂ ಅವರ ಸ್ಥಿತಿಗತಿಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು.

ದತ್, ಭಾರತದ ಮೊದಲ ಮಾರ್ಕ್ಸ್‌ವಾದಿ ಪಕ್ಷಗಳಲ್ಲಿ ಒಂದಾದ ಹಿಂದುಸ್ತಾನ್ ಸೋಷಿಯಲಿಸ್ಟ್ ಪಾರ್ಟಿಯ ಸದಸ್ಯರಾಗಿದ್ದರು.

ಬ್ರಿಟಿಶ್ ಅಧಿಕಾರಿ ಸಾಂಡರ್ಸ್ ಕೊಲೆ ಆಪಾದನೆ ಮೇಲೆ ಗಲ್ಲು ಶಿಕ್ಷೆಗೊಳಗಾದ ತನ್ನ ಒಡನಾಡಿಗಳಂತೆ ಅಲ್ಪಾಯುವಾಗದ ಬಟುಕೇಶ್ವರ್ ದತ್‌, ಸೆರೆಮನೆಯಿಂದ ಬಿಡುಗಡೆಗೊಂಡ ನಂತರ ಕ್ವಿಟ್ ಇಂಡಿಯ ಚಳುವಳಿಯಲ್ಲೂ ಸಹ ಭಾಗವಹಿಸಿದರು. ತಾನು ಮತ್ತು ತನ್ನ ಒಡನಾಡಿಗಳೆಲ್ಲರೂ ಯಾವ ಘನ ಉದ್ದೇಶಕ್ಕಾಗಿ ಹೋರಾಡಿದರೊ ಆ ಸ್ವಾತಂತ್ರ್ಯವನ್ನು ತನ್ನ ದೇಶ ಭಾರತ ಕಂಡದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಉಳಿದರು.

1965ರ ಜುಲೈನಲ್ಲಿ ಮರಣ ಹೊಂದಿದ ಬಟುಕೇಶ್ವರ್ ದತ್‌ರವರ ಪಾರ್ಥಿವ ಶರೀರವನ್ನು ಅವರ ಒಡನಾಡಿಗಳಾದ ಭಗತ್ ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್ ಅವರನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ಮಣ್ಣು ಮಾಡಲಾಯಿತು.

ವೆಬ್ದುನಿಯಾವನ್ನು ಓದಿ