ಶಾಂತಿ-ಕ್ರಾಂತಿ: ಹರಿ ಶಿವರಾಮ್ ರಾಜ್‌ಗುರು

'ಪಂಜಾಬ್ ಹುಲಿ' ಎಂದೇ ಖ್ಯಾತರಾಗಿದ್ದ ಲಾಲಾ ಲಜಪತ್‌ರಾಯ್ ಅವರನ್ನು ಚೌರಿ ಚೌರ ಘಟನೆಯಲ್ಲಿ ಮಾರಕವಾಗಿ ಹೊಡೆದು ಅವರ ಸಾವಿಗೆ ಕಾರಣನಾದ ಬ್ರಿಟೀಶ್ ಪೊಲೀಸ್ ಅಧಿಕಾರಿಯನ್ನು ಕೊಲ್ಲುವಲ್ಲಿ ಭಗತ್ ಸಿಂಗ್ ಮತ್ತು ಸುಖ್ ದೇವ್‌ರೊಂದಿಗೆ ಭಾಗಿಯಾಗಿದ್ದ ರಾಜ್‌ಗುರು, ಧೀರೋದಾತ್ತ ಕ್ರಾಂತಿಕಾರಿಯಾಗಿದ್ದು ಬಾಲ್ ಗಂಗಾಧರ್ ತಿಲಕ್ ನಾಡಾದ ಮಹಾರಾಷ್ಟ್ರದ ನೆಲದಲ್ಲಿ ಜನಿಸಿದ ಭಾರತ ಮಾತೆಯ ಹೆಮ್ಮೆಯ ಕುವರ.

ಬ್ರಿಟೀಶ್ ಅಧಿಕಾರಿಯ ಕೊಲೆಯ ನಂತರ ರಾಜ್‌ಗುರು ನಾಗ್‌ಪುರದಲ್ಲಿ ಡಾ.ಕೆ.ಬಿ.ಹೆಡಗೇವಾರ್‌ರನ್ನು ಭೇಟಿಯಾಗಿ, ಆರ್ಎಸ್ಎಸ್ ಕಾರ್ಯಕರ್ತನೊಬ್ಬನ ಮನೆಯಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ಕೆಲವು ದಿನಗಳ ನಂತರ ಪುಣೆಗೆ ಹೋದ ಅವರನ್ನು ಅಲ್ಲಿಯೇ ಬಂಧಿಸಲಾಯಿತು.

ಅಂತಿಮವಾಗಿ, ಭಗತ್ ಸಿಂಗ್, ಸುಖ್ ದೇವ್‌ ಹಾಗೂ ರಾಜ್‌ಗುರು ಮೂವರನ್ನು ಕೊಲೆ ಆಪಾದನೆಯ ಮೇಲೆ ಬಂಧಿಸಿ, 1931ರ ಮಾರ್ಚ್ 23ರಂದು ಗಲ್ಲಿಗೇರಿಸಲಾಯಿತು.

ವೆಬ್ದುನಿಯಾವನ್ನು ಓದಿ