ಮದ್ಯದ ದೊರೆ ಹಸ್ತಾಂತರ ಪ್ರಕರಣ: ಅಂತಿಮ ವಿಚಾರಣೆ ದಿನಾಂಕ ನಿಗದಿಪಡಿಸಿದ ಇಂಗ್ಲೇಂಡ್ ಕೋರ್ಟ್

ಶುಕ್ರವಾರ, 7 ಜುಲೈ 2017 (13:22 IST)
ಲಂಡನ್:ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ದಿನಾಂಕ ಮುಂದಿನ ವರ್ಷಕ್ಕೆ ಬದಲಾಯಿಸುವಂತೆ ಮದ್ಯದ ದೊರೆ ಮಾಡಿಕೊಂಡ ಮನವಿಯನ್ನು ಇಂಗ್ಲೆಂಡ್ ನ್ಯಾಯಾಲಯ ತಿರಸ್ಕರಿಸಿದೆ.
 
ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಪರವಾಗಿ ವಾದಿಸುವ ಕ್ರೌನ್ ಪ್ರಾಸಿಕ್ಯೂಷನ್ ಸೇವೆ  ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ  ಹೇಳಿಕೆ ನೀಡಿ, ಕೇಸಿನಲ್ಲಿ ಭಾರತೀಯ ಅಧಿಕಾರಿಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದು ವಿಜಯ್ ಮಲ್ಯ ಅವರನ್ನು ಗಡೀಪಾರು ಮಾಡಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ತಿಳಿಸಿದ್ದಾರೆ.
ವಿಚಾರಣೆಗೆ ಸಂಬಂಧಪಟ್ಟ ಸಾಕ್ಷಿಗಳ ಪರಾಮರ್ಶೆಯನ್ನು ನಾವು ಮುಗಿಸಿದ್ದು ಈ ಕೇಸಿನಲ್ಲಿ ಭಾರತೀಯ ಅಧಿಕಾರಿಗಳೊಂದಿಗೆ ಉತ್ತಮ ಸಹಕಾರ ಹೊಂದಿದ್ದೇವೆ ಎಂದು ಸಿಪಿಎಸ್ ನ್ಯಾಯವಾದಿ ಮಾರ್ಕ್ ಸಮ್ಮರ್ಸ್ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.
 
ಇದೇ ವೇಳೆ ಮಲ್ಯ ಗಡಿಪಾರಿಗೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ದಿನಾಂಕ ಮುಂದೂಡುವಂತೆ ಮಾಡಿಕೊಂದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಈ ವರ್ಷದ ಡಿ.4ಕ್ಕೆ ನಿಗದಿಪಡಿಸಿದೆ.
 

ವೆಬ್ದುನಿಯಾವನ್ನು ಓದಿ