ಬೈಬಲ್‌ ಹೊಂದಿದ್ದಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

ಭಾನುವಾರ, 28 ಮೇ 2023 (07:15 IST)
ಪ್ಯೊಂಗ್ಯಾಂಗ್ : ಕ್ರೈಸ್ತರ ಪವಿತ್ರಗ್ರಂಥವಾದ ಬೈಬಲ್ ಹೊಂದಿದ್ದಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ.
 
ಬೈಬಲ್ನೊಂದಿಗೆ ಸಿಕ್ಕಿಬಿದ್ದ ಉತ್ತರ ಕೊರಿಯಾದ ಕ್ರಿಶ್ಚಿಯನ್ನರು ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. ಮಕ್ಕಳು ಸೇರಿದಂತೆ ಅವರ ಕುಟುಂಬಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವರದಿಯು ಬಹಿರಂಗಪಡಿಸಿದೆ. 

2022 ರ ರಾಜ್ಯ ಇಲಾಖೆಯ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯು, ಉತ್ತರ ಕೊರಿಯಾದಲ್ಲಿ 70,000 ಕ್ರಿಶ್ಚಿಯನ್ನರನ್ನು (ಇತರೆ ಧರ್ಮಗಳನ್ನು ಅನುಸರಿಸುವ ಜನರು ಸೇರಿದಂತೆ) ಬಂಧಿಸಲಾಗಿದೆ ಎಂದು ಅಂದಾಜಿಸಿದೆ. ಸೆರೆಮನೆಗೆ ಕಳುಹಿಸಲಾದ ಅನೇಕರಲ್ಲಿ ಎರಡು ವರ್ಷದ ಮಗುವೂ ಸೇರಿದೆ ಎಂದು ವರದಿಯು ತಿಳಿಸಿದೆ.

ಕ್ರೈಸ್ತ ಧರ್ಮ ಆಚರಣೆ ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಕುಟುಂಬವನ್ನು ಬಂಧಿಸಲಾಯಿತು. ಎರಡು ವರ್ಷದ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಂಧನಕ್ಕೊಳಗಾಗಿರುವ ಕ್ರಿಸ್ಚಿಯನ್ನರು ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ದೈಹಿಕ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ