ಮಯನ್ಮಾರ್`ನಲ್ಲಿ 28 ಹಿಂದೂಗಳ ಸಾಮೂಹಿಕ ಸಮಾಧಿ ಪತ್ತೆ

ಸೋಮವಾರ, 25 ಸೆಪ್ಟಂಬರ್ 2017 (16:47 IST)
ಗಲಭೆ ಪೀಡಿತ ಮಯನ್ಮಾರ್`ನ ರಕೈನ್ ರಾಜ್ಯದಲ್ಲಿ 28 ಹಿಂದೂಗಳನ್ನ ಕೊಂದು ಸಾಮೂಹಿಕವಾಗಿ ಸಮಾಧಿ ಮಾಡಿರುವ ಪ್ರದೇಶ ಪತ್ತೆಯಾಗಿದೆ ಎಂದು ಮಯನ್ಮಾರ್ ಸೇನೆ ಹೇಳಿದೆ.  
 

ಆಗಸ್ಟ್ 25ರ ರೋಹಿಂಗ್ಯಾ ಉಗ್ರರ ದಾಳಿ ಬಳಿಕ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಈ ಸಮಾಧಿ ಸಹ ಪತ್ತೆಯಾಗಿದೆ. ಈ ಪ್ರದೇಶದ ಹಿಂದೂಗಳ 28 ಮೃತದೇಹಗಳನ್ನ ಭದ್ರತಾ ಸಿಬ್ಬಂದಿ ಗುರುತಿಸಿದ್ದು, ಪ್ರತ್ಯೇಕತಾವಾದಿಗಳ ಕೈಯಲ್ಲಿ ಕ್ರೂರವಾಗಿ ಹತ್ಯೆಯಾಗಿರುವುದು ಕಂಡು ಬಂದಿದೆ ಎಂದು ಆರ್ಮಿ ಮುಖ್ಯಸ್ಥರ ವೆಬ್ ಸೈಟ್`ನಲ್ಲಿ ತಿಳಿಸಲಾಗಿದೆ.

ರೋಹಿಂಗ್ಯಾ ಮುಸ್ಲಿಮರ ಮೇಲಿನ ಕಾರ್ಯಾಚರಣೆಯ ಪ್ರತೀಕಾರ ತೀರಿಸಿಕೊಳ್ಳಲೆಂದೇ ಈ ಹತ್ಯೆಗಳು ನಡೆದಿವೆ ಎಂದು ತಿಳಿದು ಬಂದಿದೆ. ಗಲಭೆ ಬಳಿಕ ಕಳೆದೊಂದು ತಿಂಗಳೊಳಗೆ 430,000 ರೊಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಓಡಿಹೋಗಿದ್ದಾರೆ. 30 000 ಮಂದಿ ಹಿಂದೂಗಳು ಮತ್ತು ಬೌದ್ಧರು ಸಹ ಚದುರಿಹೋಗಿದ್ದು, ಕೆಲವರು ರೊಹಿಂಗ್ಯಾ ಉಗ್ರರ ಕೈಗೆ ಸಿಕ್ಕಿ ಹತ್ಯೆಗೀಡಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ