ನೀವು ಏನಾದ್ರೂ ಮಾಡ್ಕೊಳ್ಳಿ, ಕಾಶ್ಮೀರ ವಿಷ್ಯದಲ್ಲಿ ನಾವು ಬರಲ್ಲ ಎಂದ ಚೀನಾ

ಶನಿವಾರ, 23 ಸೆಪ್ಟಂಬರ್ 2017 (07:35 IST)
ನವದೆಹಲಿ: ಕಾಶ್ಮೀರ ಗಡಿ ವಿವಾದ ವಿಚಾರದಲ್ಲಿ ಚೀನಾವನ್ನು ಎಳೆದು ತರಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಚೀನಾ ಸರಿಯಾಗಿಯೇ ತಿರುಗೇಟು ಕೊಟ್ಟಿದೆ.

 
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿರುವ ಚೀನಾ ಕಾಶ್ಮೀರ ವಿಷ್ಯದಲ್ಲಿ ನಾವು ಮೂಗು ತೂರಿಸಲ್ಲ. ನೀವೇ ವಿವಾದ ಬಗೆಹರಿಸಿಕೊಳ್ಳಿ ಎಂದು ಸ್ಪಷ್ಟವಾಗಿ ಸಂದೇಶ ನೀಡಿದೆ.

ಪಾಕಿಸ್ತಾನದ ಮನವಿ ಮೇರೆಗೆ ಇಸ್ಲಾಮಿಕ್ ಕೋಪರೇಷನ್ ಸಂಸ್ಥೆ (ಒಐಸಿ) ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಒಪ್ಪಂದ ಪಾಸು ಮಾಡುವಂತೆ ಕೇಳಿಕೊಂಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರವಾಗಿರುವ ಚೀನಾ ಇದು ಉಭಯ ದೇಶಗಳೇ ಇತ್ಯರ್ಥ ಮಾಡುವ ಸಮಸ್ಯೆ ಎಂದಿದೆ.

ಇದನ್ನೂ ಓದಿ.. ಕೆಣಕಲು ಬಂದ ಕುಲದೀಪ್ ಯಾದವ್ ಗೆ ಡೇವಿಡ್ ವಾರ್ನರ್ ತಿರುಗೇಟು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ