ಇಸ್ರೇಲ್ ದಾಳಿಗೆ ಗಾಜಾದಲ್ಲಿದ್ದ ವಿಶ್ವಸಂಸ್ಥೆಯ 6ಮಂದಿ ಸಾವು

Sampriya

ಗುರುವಾರ, 12 ಸೆಪ್ಟಂಬರ್ 2024 (15:45 IST)
Photo Courtesy X
ಟೆಲ್ ಅವೀವ್: ಗಾಜಾದಲ್ಲಿ ಆಶ್ರಯ ತಾಣವಾಗಿ ಮಾರ್ಪಾಡಾಗಿದ್ದ ಶಾಲೆ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಇದರ ಪರಿಣಾಮ ಪರಿಹಾರ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ವಿಶ್ವಸಂಸ್ಥೆಯ 6 ಅಧಿಕಾರಿಗಳು ಸೇರಿದಂತೆ ಒಟ್ಟು 34ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟು ಈ ದಾಳಿಯಲ್ಲಿ ಆರು ಅಧಿಕಾರಿಗಳು ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುತ್ತಿದ್ದ ಪರಿಹಾರ ಏಜೆನ್ಸಿಯ ಸದಸ್ಯರಾಗಿದ್ದಾರೆ. ಪ್ಯಾಲೆಸ್ಟೀನ್ ನಿರಾಶ್ರಿತರಿಗೆ ಸಹಾಯ ಮಾಡುವ ಸಂಸ್ಥೆ ಇದಾಗಿದೆ.

ನುಸಿರಾತ್‌ನಲ್ಲಿರುವ ಶಾಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್ ಎರಡು ವೈಮಾನಿಕ ದಾಳಿ ನಡೆಸಿದೆ.

ಗಾಜಾ ಪಟ್ಟಿಯ ಮಧ್ಯಭಾಗದ ನುಸಿರಾತ್‌ನಲ್ಲಿರುವ ಈ ಶಾಲೆಯು ಸುಮಾರು 12,000 ಸ್ಥಳಾಂತರಗೊಂಡ ನಿರಾಶ್ರಿತರಿಗೆ, ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡುತ್ತಿದೆ. 11 ತಿಂಗಳ ಹಿಂದೆ ಸಂಘರ್ಷ ಪ್ರಾರಂಭವಾದಾಗಿನಿಂದ ಐದನೇ ಬಾರಿ ಇಸ್ರೇಲ್ ದಾಳಿ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ