ವರ್ಷಕ್ಕೆ 11 ಮಿಲಿಯನ್ ಡಾಲರ್ ಗಳಿಸುತ್ತಿರುವ ಪುಟ್ಟ ಬಾಲಕ

ರಾಮಕೃಷ್ಣ ಪುರಾಣಿಕ

ಗುರುವಾರ, 14 ಡಿಸೆಂಬರ್ 2017 (19:09 IST)
ನ್ಯೂಯಾರ್ಕ್: ಫೋರ್ಬ್ಸ್ ವರದಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಯೂಟ್ಯೂಬ್‌ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಆರು ವರ್ಷದ ಪುಟ್ಟ ಮಗು ಸ್ಥಾನ ಪಡೆದಿದ್ದಾನೆ ಎಂದರೆ ನಂಬುತ್ತೀರಾ?

ಮಗು ಎಂದರೇನು ಹಾಗೂ ಅದು ದೊಡ್ಡ ಮೊತ್ತವನ್ನು ಗಳಿಸುತ್ತದೆ ಎಂದರೇನು? ಹೌದು, ನಾವು ಹೇಳುತ್ತಿರುವುದು ಯೂಟ್ಯೂಬ್ ಚಾನಲ್ ಹೊಂದಿರುವ ಮಗುವಿನ ಬಗ್ಗೆ.
 
ರಿಯಾನ್, "ರಿಯಾನ್ ಟಾಯ್ಸ್‌ರಿವ್ಯೂ" ಯೂಟ್ಯೂಬ್ ಚಾನಲ್‌ನ ಮಾಲೀಕನಾಗಿದ್ದು, ಇಂಟರ್ನೆಟ್ ಮೂಲಕ ಮಿಲಿಯನ್‌ಗಳಷ್ಟು ಹಣವನ್ನು ಗಳಿಸುತ್ತಿದ್ದಾನೆ. ಇದರಲ್ಲಿ ರಿಯಾನ್ ವೀಡಿಯೊ ಚಾನಲ್ ನಡೆಸಿಕೊಡುತ್ತಾನೆ ಮತ್ತು ಆಟಿಕೆಗಳನ್ನು ವಿಮರ್ಶೆ ಮಾಡುತ್ತಾನೆ.
 
ಈ ಹುಡುಗನ ಚಾನಲ್ 2017 ರಲ್ಲಿ ತೆರಿಗೆ ಕಡಿತವನ್ನು ಹೊರತುಪಡಿಸಿ 11 ಮಿಲಿಯನ್ ಡಾಲರ್‌ನಷ್ಟು (ಅಂದಾಜು 70 ಕೋಟಿ ರೂಪಾಯಿ) ಗಳಿಸಿದೆ.
 
ಈ ಹುಡುಗನು ಫೋರ್ಬ್ಸ್ ಅತಿ ಹೆಚ್ಚು ಆದಾಯ ಗಳಿಸಿದ ಯೂಟ್ಯೂಬ್ ಪ್ರಸಿದ್ಧ ವ್ಯಕ್ತಿಗಳ ವಾರ್ಷಿಕ ಪಟ್ಟಿಗೆ ಸೇರಿದ ಸಾಧನೆಯನ್ನು ಸಹ ಮಾಡಿದ್ದಾನೆ.
 
ರಿಯಾನ್‌ನ ತಾಯಿ ಮತ್ತು ತಂದೆ ಈ ಪುಟ್ಟ ಹುಡುಗನ ಪ್ರಸಿದ್ಧ ಚಾನಲ್‌ನ ಸ್ಪೂರ್ತಿಯಾಗಿದ್ದಾರೆ. ಅವರು ಈ ಮಗುವಿನ ಅದ್ಭುತ ಕೆಲಸವನ್ನು ಚಿತ್ರೀಕರಿಸುತ್ತಾರೆ ಮತ್ತು ನಿರ್ಮಾಣ ಮಾಡುತ್ತಾರೆ. ಮಾರ್ಚ್ 2015 ರಂದು "ರಿಯಾನ್ ಟಾಯ್ಸ್‌ರಿವ್ಯೂ" ಲೈವ್ ಬಂದಿತ್ತು, ಆಗ ಈ ಹುಡುಗನ ವಯಸ್ಸು ಕೇವಲ ಮೂರು ವರ್ಷ.
 
"ರಿಯಾನ್ ಟಾಯ್ಸ್‌ರಿವ್ಯೂ" ನಿಧಾನಗತಿಯ ಆರಂಭವನ್ನು ಹೊಂದಿತ್ತು, ಆದರೆ ಜುಲೈ 2015 ರ ಒಂದು ದಿನ, ಇದ್ದಕ್ಕಿದ್ದಂತೆ ಹುಡುಗನ ಅದ್ಭುತ ಕೆಲಸ ಈತನನ್ನು ಎತ್ತಿಹಿಡಿದಿತ್ತು. ಈತನ ಒಂದು ವೀಡಿಯೊ ಅತೀಹೆಚ್ಚು ವೈರಲ್ ಆಗಿತ್ತು. ಈ ವೀಡಿಯೊ ಪಿಕ್ಸಾರ್‌ನ 'ಕಾರುಗಳ' ಆವೃತ್ತಿಯ 100 ಕ್ಕಿಂತ ಹೆಚ್ಚು ಆಟಿಕೆಗಳನ್ನು ಹೊಂದಿದ್ದ "ಜೇಂಟ್ ಎಗ್ ಸರ್ಪ್ರೈಸ್" ಬಾಕ್ಸ್‌ನ ಅನ್‌ಬಾಕ್ಸ್ ಮಾಡುವುದು ಮತ್ತು ವಿಮರ್ಶೆಯ ಕುರಿತಾಗಿತ್ತು. ಈ ವೀಡಿಯೊ 800 ಮಿಲಿಯನ್ ವೀಕ್ಷಣೆಗಳನ್ನು ಪಡೆದಿತ್ತು.
 
ಪ್ರಾರಂಭವಾಗಿದ್ದು ಹೇಗೆ
 
"ರಿಯಾನ್ ಬಹಳಷ್ಟು ಆಟಿಕೆ ವಿಮರ್ಶೆ ಚಾನಲ್‌ಗಳನ್ನು ವೀಕ್ಷಿಸುತ್ತಿದ್ದ, ಇವಾನ್‌ಟ್ಯೂಬ್‌ಎಚ್‌ಡಿ ಮತ್ತು ಹೂಲೀಯನ್ ಮಾಯಾ ಚಾನಲ್‌ಗಳು 'ಥಾಮಸ್ ದ ಟ್ಯಾಂಕ್ ಎಂಜಿನ್' ಬಗ್ಗೆ ಬಹಳಷ್ಟು ವೀಡಿಯೊಗಳನ್ನು ಮಾಡುತ್ತಿದ್ದರಿಂದ ಹಾಗೂ ರಿಯಾನ್ ಥಾಮಸ್‌ನಲ್ಲಿ ಉತ್ತಮನಾಗಿದ್ದ ಕಾರಣ ಇವುಗಳು ಈತನ ಮೆಚ್ಚಿನ ಚಾನ‌ಲ್‌ಗಳು," ಎಂದು ಅವನ ತಾಯಿ ಕೊನೆಯ ವರ್ಷ ಟ್ಯೂಬ್‌ಫಿಲ್ಟರ್‌ಗೆ ಹೇಳಿದ್ದರು.
 
"ಒಂದು ದಿನ, ಅವನು 'ಇತರ ಎಲ್ಲ ಮಕ್ಕಳು ಯೂಟ್ಯೂಬ್‌ನಲ್ಲಿರುವಾಗ ನಾನು ಏಕೆ ಇಲ್ಲ?' ಎಂದು ನನ್ನನ್ನು ಕೇಳಿದ, ಆದ್ದರಿಂದ, ಹೌದು ನಾವು ಇದನ್ನು ಮಾಡಬಹುದು ಎಂದು ನಿರ್ಧರಿಸಿದೆವು. ನಂತರ, ನಾವು ಅವನ ಮೊದಲ ಆಟಿಕೆಯನ್ನು ಪಡೆಯಲು ಅವನನ್ನು ಅಂಗಡಿಗೆ ಕರೆದುಕೊಂಡು ಹೋದೆವು. ಅದು ಲೀಗೋ ಟ್ರೇನ್ ಸೆಟ್ ಎಂದು ಭಾವಿಸುತ್ತೇನೆ ಮತ್ತು ಅಲ್ಲಿಂದ ಪ್ರಾರಂಭವಾಯಿತು," ಎಂದು ಅವರು ಹೇಳಿದರು.
 
ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುವಂತೆ, ಇಲ್ಲಿ ಅವನ ತಾಯಿ ಲೋವಾನ್ ಈ ಯಶಸ್ಸಿಗೆ ಕಾರಣವಾಗಿದ್ದಾರೆ, ಅವರು ಸಂಪೂರ್ಣವಾಗಿ ಈ ಚಾನಲ್‌ಗಾಗಿ ಕಾರ್ಯನಿರ್ವಹಿಸಲು ತಮ್ಮ ಪ್ರೌಢ ಶಾಲೆಯಲ್ಲಿನ ವಿಜ್ಞಾನ ಶಿಕ್ಷಕಿಯ ಉದ್ಯೋಗವನ್ನೇ ತೊರೆದರು.
 
ವಾವ್ ಪುಟ್ಟ ವಯಸ್ಸಿಗೆ ಅದೆಂತಹ ಸಾಧನೆ, ನಾವಿನ್ನು ಬೆಳಗ್ಗೆ 9 ರಿಂದ ಸಂಜೆ 5 ರವರೆಗಿನ ಉದ್ಯೋಗಕ್ಕೆ ಜೋತು ಬಿದ್ದಿದ್ದೇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ