ದಾವೂದ್ ಇಬ್ರಾಹಿಂ ಗ್ಯಾಂಗ್ ನಲ್ಲಿ ಮಹಿಳೆಯರಿಗೆ ಏನು ಕೆಲಸ ಗೊತ್ತೇ?!
ಮಹಿಳೆಯರಿಂದ ಹಣ ವಸೂಲಿ ಮಾಡುವುದೇ ಈ ಮಹಿಳಾ ಗ್ಯಾಂಗ್ ಸದಸ್ಯರ ಕೆಲಸವಂತೆ. ಇತ್ತೀಚೆಗೆ ಇದೇ ರೀತಿ ಮುಂಬೈ ಮೂಲದ ಮಹಿಳೆಯೊಬ್ಬರು ಪಾಕ್ ದೂರವಾಣಿ ಸಂಖ್ಯೆಯೊಂದರಿಂದ ತನಗೆ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಬಂದಿತ್ತು ಎಂದು ದೂರು ನೀಡಿದ್ದರು ಎಂದು ಆ ಅಧಿಕಾರಿ ಬಹಿರಂಗಪಡಿಸಿದ್ದಾರೆ.
ಸಾಮಾನ್ಯವಾಗಿ ಭೂಗತ ಪಾತಕಿಗಳು ತಮ್ಮ ಕಾರ್ಯಾಚರಣೆಯಲ್ಲಿ ಮಹಿಳೆಯರನ್ನು ದೂರವಿಡುತ್ತಾರೆ. ಆದರೆ ದಾವೂದ್ ಮಹಿಳೆಯರಿಂದ ಸುಲಿಗೆ ಮಾಡಲು ಮಹಿಳೆಯರನ್ನೇ ನೇಮಿಸಿಕೊಂಡಿದ್ದಾನೆ ಎನ್ನಲಾಗಿದೆ.