ಭೀಕರ ಸುನಾಮಿಗೆ 60 ಮಂದಿ ಬಲಿ !

ಮಂಗಳವಾರ, 27 ಡಿಸೆಂಬರ್ 2022 (07:07 IST)
ವಾಷಿಂಗ್ಟನ್ : ಅಮೆರಿಕಾದಲ್ಲಿ ಹಿಮ ಸುನಾಮಿ ಭೀಭತ್ಸ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ.

ನಿನ್ನೆಯಷ್ಟೇ 38 ಇದ್ದ ಸಾವಿನ ಪ್ರಮಾಣ ಇಂದು ಏಕಾ-ಏಕಿ 60ರ ಗಡಿ ದಾಟಿದೆ. ನ್ಯೂಯಾರ್ಕ್ ಸಿಟಿ ಒಂದರಲ್ಲೇ 27 ಮಂದಿ ಸೇರಿದಂತೆ ದೇಶಾದ್ಯಂತ ಸುಮಾರು 60 ಮಂದಿ ಮೃತಪಟ್ಟಿದ್ದಾರೆ. ಅತಿಯಾದ ಹಿಮದಿಂದಾಗಿ ಕಾರು, ಬಸ್, ಅಂಬುಲೆನ್ಸ್ ಹಾಗೂ ಟ್ರಕ್ಗಳು ಹಿಮದಲ್ಲಿ ಹೂತು ಹೋಗಿವೆ.

ಇದರಿಂದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ ಸಾಧ್ಯವಾಗಿದೆ. ಇಂದು ಬೆಳಗ್ಗೆಯಿಂದ ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿದೆ. ಪಶ್ಚಿಮ ನ್ಯೂಯಾರ್ಕ್ನಲ್ಲಿ ಸುಮಾರು 9 ಇಂಚು (23 ಸೆಂ.ಮೀ.) ಪ್ರಮಾಣದಲ್ಲಿ ಹಿಮ ಬೀಳುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ