24 ರ ಯುವಕನ ಮದುವೆಯಾದ 61 ವರ್ಷದ ಅಜ್ಜಿ!

ಮಂಗಳವಾರ, 14 ಸೆಪ್ಟಂಬರ್ 2021 (09:35 IST)
ನ್ಯೂಯಾರ್ಕ್: 24 ವರ್ಷದ ಯುವಕನೊಬ್ಬ 61 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ ವಿಶೇಷ ಘಟನೆ ಅಮೆರಿಕಾದ ಜಾರ್ಜಿಯಾದಲ್ಲಿ ನಡೆದಿದೆ.


ಕೆಲವು ವರ್ಷಗಳ ಹಿಂದೆ ಇಬ್ಬರೂ ಭೇಟಿಯಾಗಿದ್ದರು. ಅದಾದ ಬಳಿಕ ಇಬ್ಬರಿಗೂ ಸಂಪರ್ಕ ತಪ್ಪಿ ಹೋಗಿತ್ತು. ಕಳೆದ ವರ್ಷ ಮತ್ತೆ ಇಬ್ಬರೂ ಭೇಟಿಯಾಗಿದ್ದರು. ಇದಾದ ಬಳಿಕ ಯುವಕನಿಗೆ ಅಜ್ಜಿಯ ಮೇಲೆ ಪ್ರೇಮಾಂಕುರವಾಗಿತ್ತು. ಬಳಿಕ ಯುವಕ ಮದುವೆ ಪ್ರಸ್ತಾಪವಿಟ್ಟಿದ್ದ.

ಇದೀಗ ಇಬ್ಬರೂ ವಿವಾಹವಾಗಿದ್ದಾರೆ. ತಮ್ಮ ವಿವಾಹ ಕಾರ್ಯಕ್ರಮವನ್ನು ಟಿಕ್ ಟಾಕ್ ಮೂಲಕ ಲೈವ್ ಆಗಿ ಪ್ರಸಾರ ಮಾಡಿದ್ದಾರೆ. ವಿಶೇಷವೆಂದರೆ ಅಜ್ಜಿಗೆ 17 ವರ್ಷದ ಮೊಮ್ಮಗವೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ