ಕೈರೋ : ಈಜಿಪ್ಟ್ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್ನಲ್ಲಿ ಭಾನುವಾರ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಚರ್ಚ್ನಲ್ಲಿದ್ದ 41 ಜನರು ಸಾವನ್ನಪ್ಪಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯ ವಾಯುವ್ಯ, ಕಾರ್ಮಿಕ ವರ್ಗದ ಜಿಲ್ಲೆಯ ಇಂಬಾಬಾದಲ್ಲಿರುವ ಅಬು ಸಿಫೈನ್ ಚರ್ಚ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಉದ್ಭವಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲಾ ಪ್ರದೇಶಗಳಿಂದ ಸೇವೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ನಲ್ಲಿ ಹಲವಾರು ಮಾರಣಾಂತಿಕ ಬೆಂಕಿ ಅವಘಡಗಳು ನಡೆದಿವೆ.