ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ !
1,000 ಚದರ ಅಡಿಯ ಅಂಗಡಿ ಇದಾಗಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ. ಸ್ಟಾರ್ ಬಜಾರ್ ಸಮೀಪದ ಲಿಂಕ್ ರೋಡ್ ಬಳಿ ಇರುವ ಈ ಶಾಪ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಅದೃಷ್ಠವಶಾತ್ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಗ್ನಿಅವಘಢದ ವಿಡಿಯೋ ಬಹಿರಂಗವಾಗಿದ್ದು, ಆತಂಕ ತರುವಂತಿದೆ.
ಇಲ್ಲಿನ ಮಹಾಲಕ್ಷ್ಮೀ ಎಸ್ಟೇಟ್ ಸಮೀಪದ ಚಿತ್ರಕೋಟ್ ಸ್ಟುಡಿಯೋ ಹಿಂಭಾಗದಲ್ಲಿ ಇಂದು ಸಂಜೆ 4.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.