ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಗೆ ಬೆಂಕಿ ಹಚ್ಚಿದ ಪತ್ನಿ

ಬುಧವಾರ, 10 ಆಗಸ್ಟ್ 2022 (10:05 IST)
ಲಕ್ನೋ: ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಪತಿಯನ್ನೇ ಬೆಂಕಿ ಹಚ್ಚಿ ಸಜೀವ ದಹನ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಅನುಮಾನಗೊಂಡ ಪತಿ ಆಕೆಯನ್ನು ಪ್ರಶ್ನಿಸಿದ್ದ. ಇದು ಪತ್ನಿಯನ್ನು ಕೆರಳಿಸಿದೆ. ಈ ಕಾರಣಕ್ಕೆ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.

ನೆರೆಹೊರೆಯವರು ತೀವ್ರ ಸುಟ್ಟಗಾಯಗಳಾಗಿದ್ದ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಬದುಕುಳಿಯಲಿಲ್ಲ. ಈ ಸಂಬಂಧ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ