ಮಾಲೆ : ಬೇರೆ ಬೇರೆ ದೇಶಗಳಿಂದ ಕೆಲಸಕ್ಕಾಗಿ ಬಂದು ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ವಾಸವಾಗಿದ್ದವರ ಇಕ್ಕಟ್ಟಾದ ವಸತಿಗೃಹಗಳಲ್ಲಿ ಅಗ್ನಿ ಅವಘಡ ಕಾಣಿಸಿಕೊಂಡಿದ್ದು,
ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನೆಲ ಮಹಡಿಯಲ್ಲಿ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳ ಕಾಲ ಬೇಕಾಯಿತು.
ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಇದೀಗ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೃತರಲ್ಲಿ ಒಂಬತ್ತು ಮಂದಿ ಭಾರತ ಮೂಲದವಾರಗಿದ್ದು, ಓರ್ವ ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.