ಯುದ್ಧ : ಏರ್ ಇಂಡಿಯಾ ವಿಮಾನ ರದ್ದು!

ಶುಕ್ರವಾರ, 8 ಏಪ್ರಿಲ್ 2022 (09:28 IST)
ನವದೆಹಲಿ : ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಬೆದರಿಕೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಕಂಪನಿ ಏರ್ ಇಂಡಿಯಾ ತನ್ನ ದೆಹಲಿಯಿಂದ ಮಾಸ್ಕೋಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಿದೆ.
 
ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ಭಾರತ ಬೆದರಿಕೆಗಳನ್ನು ಗ್ರಹಿಸಿದ್ದು, ದೆಹಲಿ-ಮಾಸ್ಕೋ ವಿಮಾನವನ್ನು ರದ್ದುಗೊಳಿಸಿದೆ. ಈಗಾಗಲೇ ವಿಮಾನದ ಟಿಕೇಟ್ಗಳನ್ನು ಖರೀದಿಸಿದ್ದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ಭರವಸೆ ನೀಡಿದೆ. 

ರಷ್ಯಾದ ರಾಯಭಾರ ಕಚೇರಿ ಈ ಬಗ್ಗೆ ಟೆಲಿಗ್ರಾಮ್ ಮೂಲಕ ಮಾಹಿತಿ ನೀಡಿದೆ. ಭಾರತೀಯ
ವಿಮಾಮಯಾನ ಸಂಸ್ಥೆ ಏರ್ ಇಂಡಿಯಾ ದೆಹಲಿ-ಮಾಸ್ಕೋ ಮಾರ್ಗದಲ್ಲಿ ಪ್ರಯಾಣಿಸಬೇಕಿದ್ದ ವಿಮಾನವನ್ನು ಸದ್ಯ ಸ್ಥಗಿತಗೊಳಿಸಿದೆ.

ಈಗಿನ ಪರಿಸ್ಥಿತಿಯಲ್ಲಿ ವಿಮಾನ ಪ್ರಯಾಣ ಪುನರಾರಂಭ ಅನಿಶ್ಚಿತವಾಗಿದೆ. ರದ್ದಾದ ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಟಿಕೆಟ್ನ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ತಿಳಿಸಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ