ವಿಮಾನ ಇಂಧನ ಬೆಲೆ ಹೆಚ್ಚಳ!

ಶುಕ್ರವಾರ, 1 ಏಪ್ರಿಲ್ 2022 (12:24 IST)
ನವದೆಹಲಿ : ಜೆಟ್ ಇಂಧನ ದರ ಶೇ.2ರಷ್ಟು ಹೆಚ್ಚಿಸಲಾಗಿದೆ. ವಿಮಾನ ಇಂಧನ ದರ ಹೆಚ್ಚಳವಾಗಿರುವ ಕಾರಣ ಪ್ರಯಾಣದ ಟಿಕೆಟ್ ದರ ಕೂಡಾ ದುಬಾರಿ ಆಗಿದೆ.

ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ವಿಮಾಗಳಿಗೆ ಬಳಸಲಾಗುತ್ತದೆ. ಈ ಇಂಧನಕ್ಕೆ ಪ್ರತಿ ಕಿಲೋ ಲೀಟರ್ಗೆ ರೂ. 2,258.54 ಅಥವಾ ಶೇ. 2 ರಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್ಗೆ ರೂ. 1,12,924.83 ಕ್ಕೆ ಏರಿಸಲಾಗಿದೆ.

ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಶೇ.40 ರಷ್ಟನ್ನು ಹೊಂದಿರುವ ಜೆಟ್ ಇಂಧನವು ಈ ವರ್ಷ ಗರಿಷ್ಠ ಮಟ್ಟಕ್ಕೆ ಏರಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಟೋ ಇಂಧನ ದರಗಳು ಲೀಟರ್ಗೆ 6.40 ರೂ. ಏರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ