ಸಾರ್ವಜನಿಕವಾಗಿ ಕಾಣೆಯಾಗಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಪತ್ತೆ

ಬುಧವಾರ, 30 ನವೆಂಬರ್ 2022 (12:58 IST)
ಬೀಜಿಂಗ್ : 2020ರಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಇದೀಗ ಜಪಾನ್ನಲ್ಲಿ ಕಾಣಿಸಿಕೊಂಡಿದ್ದು, ಟೋಕಿಯೋದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಜಾಕ್ ಮಾ ಚೀನಾದಲ್ಲಿ ಏಕಸ್ವಾಮ್ಯ ವಿರೋಧಿ ನಿಯಮಗಳನ್ನು ಉಲ್ಲಂಘಿಸಿ ಚೀನಾ ಸರ್ಕಾರದಿಂದ ತೊಂದರೆಗೀಡಾಗಿದ್ದರು.

ಅದಾದ ಬಳಿಕ ಚೀನೀಸ್ ರೆಗ್ಯೂಲೇಟರ್ಸ್ನವರು ಅಲಿಬಾಬಾ ಸಂಸ್ಥೆಯ ಫಿಂಟೆಕ್ ದೈತ್ಯ ಆಂಟ್ ಫೈನಾನ್ಶಿಯಲ್ನ ಐಪಿಒವನ್ನು ಅಮಾನತಿನಲ್ಲಿಟ್ಟು, ಅಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿದ್ದರು. ಆ ಬಳಿಕ ಜಾಕ್ ಮಾ ಕಾಣೆಯಾಗಿದ್ದರು ಎನ್ನಲಾಗಿತ್ತು.

ಇದೀಗ ಮೂಲಗಳ ಪ್ರಕಾರ ಜಾಕ್ ಮಾ ಅವರು ಕಳೆದ 6 ತಿಂಗಳಿಂದ ಟೋಕಿಯೋದ ಹೊರಗಿನ ಗ್ರಾಮಾಂತರದಲ್ಲಿ ಸ್ಕೀ ರೆಸಾರ್ಟ್ಗಳಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಆಗಾಗ ಅಮೆರಿಕ ಹಾಗೂ ಇಸ್ರೇಲ್ಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ