ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್?

ಬುಧವಾರ, 22 ಫೆಬ್ರವರಿ 2023 (07:29 IST)
ಮಾಸ್ಕೋ : ಉಕ್ರೇನ್ನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಲು ಪಾಶ್ಚಿಮಾತ್ಯರೇ ಕಾರಣ. ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಅವರೇ. ಅದರಿಂದ ಸಂತ್ರಸ್ತರಾದವರು, ಎಲ್ಲದಕ್ಕೂ ಪಾಶ್ಚಿಮಾತ್ಯ ಗುಂಪೇ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರೋಕ್ಷವಾಗಿ ಅಮೆರಿಕಾವನ್ನ ದೂಷಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್ಗೆ ಅಚ್ಚರಿ ಭೇಟಿ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಉಕ್ರೇನ್ ಮೇಲಿನ ಸಮರ ಶುರುವಾಗಿ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ರಷ್ಯಾ ಅಸೆಂಬ್ಲಿಯಲ್ಲಿ ಮಾತನಾಡಿದ ಪುಟಿನ್,

ಪಾಶ್ಚಿಮಾತ್ಯರು ಸ್ಥಳೀಯ ಬಿಕ್ಕಟ್ಟನ್ನು ಜಾಗತಿಕ ಸಂಘರ್ಷವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಲಿದ್ದೇವೆ. ರಾಷ್ಟ್ರದ ಉಳಿಯುವಿಕೆಯ ಕುರಿತಾಗಿ ನಾವು ಮಾತನಾಡುತ್ತಿದ್ದೇವೆ ಎಂದು ಪುಟಿನ್ ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ