16ನೇ ಮಹಡಿಯಿಂದ ಬಿದ್ದು ವ್ಲಾಡಿಮಿರ್ ಪುಟಿನ್ ಆಪ್ತೆ ಸಾವು!

ಶನಿವಾರ, 18 ಫೆಬ್ರವರಿ 2023 (09:10 IST)
ಮಾಸ್ಕೋ : ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಕಟ್ಟಡದ 16 ಮಹಡಿಯಿಂದ ಕೆಳಗೆ ಬಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತೆ ಹಾಗೂ ರಷ್ಯಾದ ರಕ್ಷಣಾ ಸಚಿವಾಲಯದ ಹಣಕಾಸು ಬೆಂಬಲ ವಿಭಾಗದ ಮುಖ್ಯಸ್ಥೆ ಮರೀನಾ ಯಾಂಕಿನಾ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇಂಟ್ ಪೀಟರ್ಸ್ಬರ್ಗ್ನ ಕಲಿನಿನ್ಸ್ಕಿ ಪ್ರದೇಶದ ವಸತಿ ಸಂಕೀರ್ಣದ ಪಾದಚಾರಿ ಮಾರ್ಗದಲ್ಲಿ ಮರೀನಾ ಯಾಂಕಿನಾ (58) ಅವರ ಮೃತದೇಹ ಕಂಡು ನೆರೆಹೊರೆಯವರು ಮಾಹಿತಿ ನೀಡಿದ್ದರು.

ಉಕ್ರೇನ್ ವಿರುದ್ಧ ಪುಟಿನ್ ಸಾರಿದ ಯುದ್ಧಕ್ಕೆ ಹಣಕಾಸು ನಿರ್ವಹಿಸುವಲ್ಲಿ ಮರೀನಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಷ್ಯಾದ ಐದು ಭೌಗೋಳಿಕ ಬೆಟಾಲಿಯನ್ಗಳಲ್ಲಿ ಒಂದಾದ ವೆಸ್ಟರ್ನ್ ಮಿಲಿಟರಿ ಡಿಸ್ಟ್ರಿಕ್ಟ್ನ ಹಣಕಾಸು ನಿರ್ದೇಶಕರಾಗಿದ್ದರು.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ನಂತರ ರಷ್ಯಾದ ಅನೇಕ ಪ್ರಮುಖರು ಸಾವಿಗೀಡಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ