ಅಮೆರಿಕದ ಬ್ಲಾಕ್ ಹಾಕ್ ಹೆಲಿಕಾಪ್ಟರ್ಗಳು ಡಿಕ್ಕಿ : 9 ಯೋಧರು ಸಾವು

ಶುಕ್ರವಾರ, 31 ಮಾರ್ಚ್ 2023 (09:14 IST)
ವಾಷಿಂಗ್ಟನ್ : ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ ಸೈನಿಕರ ಬ್ಲಾಕ್ ಹಾಕ್ ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿಯಾಗಿ ಪತನಗೊಂಡಿವೆ. ದುರಂತದಲ್ಲಿ 9 ಸೈನಿಕರು ಮೃತಪಟ್ಟಿದ್ದಾರೆ.
 
ಹೆಲಿಕಾಪ್ಟರ್ಗಳು 101 ನೇ ವಾಯುಗಾಮಿ ವಿಭಾಗಕ್ಕೆ ಸೇರಿದ್ದವಾಗಿವೆ. ಫೋರ್ಟ್ ಕ್ಯಾಂಪ್ಬೆಲ್ನ ವಾಯುವ್ಯದಲ್ಲಿರುವ ಕೆಂಟುಕಿಯ ಟ್ರಿಗ್ ಕೌಂಟಿಯಲ್ಲಿ ಬುಧವಾರ ರಾತ್ರಿ 10:00 ಗಂಟೆಗೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ಆಂಥೋನಿ ಹೋಫ್ಲರ್ ತಿಳಿಸಿದ್ದಾರೆ. 

ಎರಡೂ ಹೆಲಿಕಾಪ್ಟರ್ಗಳು, ಪೈಲಟ್ಗಳ ತಪ್ಪಿನಿಂದ ಪರಸ್ಪರ ಘರ್ಷಣೆಯಿಂದ ಆಕಾಶದಲ್ಲೇ ಸ್ಪೋಟವಾಗಿ ನೆಲಕ್ಕಪ್ಪಳಿಸಿದವು. ಪರಿಣಾಮವಾಗಿ 9 ಯೋಧರು ಸಾವನ್ನಪ್ಪಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ