ಭೀಕರ ಅಪಘಾತ : 20ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸಾವು!

ಮಂಗಳವಾರ, 28 ಮಾರ್ಚ್ 2023 (09:58 IST)
ರಿಯಾದ್ : ಮುಸ್ಲಿಮರ ಪವಿತ್ರ ನಗರ ಮೆಕ್ಕಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಸೇತುವೆಯೊಂದರಲ್ಲಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ನಲ್ಲಿದ್ದ 20 ಜನರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಬಸ್ನಲ್ಲಿದ್ದ ಇನ್ನೂ ಹಲವರಿಗೆ ಗಾಯಗಳಾಗಿವೆ ಎಂದು ಸೌದಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಘಟನೆ ದಕ್ಷಿಣ ಪ್ರಾಂತ್ಯದ ಅಸಿರ್ನಲ್ಲಿ ನಡೆದಿದೆ. ಯಾತ್ರಾರ್ಥಿಗಳನ್ನು ಮೆಕ್ಕಾ ಹಾಗೂ ಮದೀನಾಗೆ ಕರೆದುಕೊಂಡು ಹೋಗುವ ಸಂದರ್ಭ ನಿರಂತರವಾಗಿ ಸವಾಲು ಎದುರಿಸಲಾಗುತ್ತಿದೆ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತಿದೆ. 

ಇದು ರಂಜಾನ್ನ ಮೊದಲ ವಾರವಾಗಿರುವುದರಿಂದ ಲಕ್ಷಾಂತರ ಮುಸ್ಲಿಮರು ಹಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಇದೀಗ ಸಂಭವಿಸಿರುವ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. 30 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿರುವವರಲ್ಲಿ ಹಲವರು ಬೇರೆ ಬೇರೆ ದೇಶಗಳಿಂದ ಬಂದಿರುವವರು ಎಂಬುದು ತಿಳಿದುಬಂದಿದೆ. ಆದರೆ ಅವರ ಗುರುತುಗಳನ್ನು ಇನ್ನೂ ತಿಳಿಸಲಾಗಿಲ್ಲ.

ಈ ವೇಳೆ ಭಾರೀ ಬೆಂಕಿ ಸಂಭವಿಸಿದ್ದು, ಜನರ ಸಾವಿಗೆ ಕಾರಣವಾಗಿದೆ. 2019ರ ಅಕ್ಟೋಬರ್ನಲ್ಲೂ ಇಂತಹುದೇ ಇನ್ನೊಂದು ಭೀಕರ ಅಪಘಾತ ಸಂಭವಿಸಿತ್ತು. ಮದೀನಾ ಬಳಿ ದೊಡ್ಡ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು, ಸುಮಾರು 35 ವಿದೇಶಿಗರು ಸಾವನ್ನಪ್ಪಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ