ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್!

ಶುಕ್ರವಾರ, 17 ಮಾರ್ಚ್ 2023 (09:59 IST)
ವಾಷಿಂಗ್ಟನ್ : ಅಮೆರಿಕದಲ್ಲಿ ಕಳೆದ ಕೆಲವು ದಿನಗಳಿಂದ ಒಂದಾದ ಮೇಲೊಂದರಂತೆ ಬ್ಯಾಂಕುಗಳು ದಿವಾಳಿಯಾಗುತ್ತಿವೆ. ಕಳೆದ 10 ದಿನಗಳಲ್ಲಿ ಅಮೆರಿಕದ 3 ಬ್ಯಾಂಕುಗಳು ದಿವಾಳಿಯಾಗಿರುವ ಬೆನ್ನಲ್ಲೇ ಜಗತ್ತಿನ 8ನೇ ಅತಿ ದೊಡ್ಡ ಬ್ಯಾಂಕ್ ‘ಕ್ರೆಡಿಟ್ ಸ್ಯೂಸಿ’ ನೆಲಕಚ್ಚುವ ಭೀತಿಯಲ್ಲಿದೆ.
 
ಸ್ವಿಡ್ಜರ್ಲ್ಯಾಂಡ್ ಮೂಲದ ಕ್ರೆಡಿಟ್ ಸ್ಯೂಸಿ ಬ್ಯಾಂಕ್ನ ಷೇರುಗಳು ಬುಧವಾರ ಶೇ.30 ರಷ್ಟು ಕುಸಿದಿದೆ. ಈ ಹಿನ್ನೆಲೆ ಕ್ರೆಡಿಟ್ ಸ್ಯೂಸಿ ಮುಚ್ಚಿಹೋಗುವ ಭೀತಿಯಲ್ಲಿದೆ. ಈ ನಡುವೆ ಸ್ವಿಸ್ ನ್ಯಾಷನಲ್ ಬ್ಯಾಂಕ್ ಕ್ರೆಡಿಟ್ ಸ್ಯೂಸಿಯನ್ನು ಬಲಪಡಿಸಲು 54 ಶತಕೋಟಿ ಡಾಲರ್ ನೀಡಲು ಮುಂದಾಗಿದೆ.

ಕ್ರೆಡಿಟ್ ಸ್ಯೂಸಿ ಬ್ಯಾಂಕ್ ಕುಸಿಯುವ ಸಾಧ್ಯತೆಯಿದೆ ಎಂದು ಖ್ಯಾತ ಹೂಡಿಕೆ ತಜ್ಞ ರಾಬರ್ಟ್ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ಕಳೆದ 10 ದಿನಗಳಲ್ಲಿ ಅಮೆರಿಕದ ಸಿಲ್ವರ್ ಗೇಟ್ ಕ್ಯಾಪಿಟಲ್, ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೆಚರ್ ಬ್ಯಾಂಕ್ಗಳನ್ನು ಮುಚ್ಚಲಾಗಿದೆ. ಒಂದು ವೇಳೆ ತಜ್ಞರ ಭವಿಷ್ಯದಂತೆ ಕ್ರೆಡಿಟ್ ಸ್ಯೂಸಿ ಬ್ಯಾಂಕ್ ಕೂಡಾ ದಿವಾಳಿಯಾದರೆ ಅಮೆರಿಕದ ಆರ್ಥಿಕತೆ ಬುಡಮೇಲಾಗುವ ಸಾಧ್ಯತೆಯಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ