ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

Sampriya

ಭಾನುವಾರ, 20 ಜುಲೈ 2025 (14:24 IST)
Photo Credit X
ಮಾಸ್ಕೊ: ಪೆಸಿಫಿಕ್ ಸಮುದ್ರದ ಬಳಿ ಇಂದು 7.4 ತೀವ್ರತೆಯಲ್ಲಿ ಎರಡು ಭಾರಿ ಭೂಕಂಪನ ಸಂಭವಿಸಿದೆ. ಇದರ ಬೆನ್ನಲ್ಲೇ ರಷ್ಯಾದ ಕಾಂಚತ್ಕಾ ಪೆನಿನ್ಸುಲಾಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.

ಪೂರ್ವ ಪೆಟ್ರೊಪವ್ಲಾವ್ಸ್ಕ್ ಕಾಂಚತಸ್ಕ್ಸಿ ನಗರದಿಂದ 20 ಕಿಮೀ (12 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ಹೇಳಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಸಮೀಪದಲ್ಲೇ 6.7 ತೀವ್ರತೆಯ ಮತ್ತೊಂದು ಭೂಕಂಪನ ದಾಖಲಾಗಿದೆ ಎಂದೂ ತಿಳಿಸಿದೆ.

ಇಂದು ಮುಂಜಾನೆ ರಶ್ಯದ ದೂರದ ಪೂರ್ವ ಪ್ರಾಂತ್ಯವಾದ ಕಾಂಚತ್ಕಾದ ಕರಾವಳಿಯ ಬಳಿ ಸುಮಾರು 6.5ಗಿಂತ ಹೆಚ್ಚು ತೀವ್ರತೆ ಹೊಂದಿದ್ದ ಅವಳಿ ಭೂಕಂಪಗಳು ಸಂಭವಿಸಿವೆ ಎಂದು ಜರ್ಮನ್ ಭೌಗೋಳಿಕ ವಿಜ್ಞಾನಗಳ ಕೇಂದ್ರ ಹೇಳಿದೆ. ಸುಮಾರು 10 ಕಿಮೀ (6 ಮೈಲಿ) ಆಳದಲ್ಲಿ ಕ್ರಮವಾಗಿ 6.6 ಹಾಗೂ 6.7 ತೀವ್ರತೆಯಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅದು ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಈ ಪ್ರದೇಶದಲ್ಲಿ ಒಟ್ಟು ಐದು ಭೂಕಂಪಗಳು ಸಂಭವಿಸಿವೆ. ಎಲ್ಲವೂ ಸುಮಾರು 10 ಕಿಲೋಮೀಟರ್ ಆಳದಲ್ಲಿವೆ. ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭೂಕಂಪಗಳಿಂದ ಗಮನಾರ್ಹ ಹಾನಿ ಅಥವಾ ಸಾವುನೋವುಗಳ ಬಗ್ಗೆ ಈವರೆಗೆ ಯಾವುದೇ ವರದಿಗಳು ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ