ಮಗುವಿಗೆ ಟ್ರಂಪ್ ಹೆಸರಿಟ್ಟ ಅಪಘ್ಘಾನಿಸ್ತಾನದ ಕುಟುಂಬ

ಸೋಮವಾರ, 19 ಮಾರ್ಚ್ 2018 (13:38 IST)
ಕಾಬೂಲ್‌: ಅಮೆರಿಕದ ಹೆಸರು ಕೇಳಿದರೆ ಉರಿದು ಬೀಳುವ ಅಘ್ಘಾನಿಸ್ತಾನದಲ್ಲಿ ಒಬ್ಬರು ತಮ್ಮ ಮಗನಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ಇಟ್ಟಿದ್ದಾರಂತೆ.


ಅಮೆರಿಕಾದ ಅಧ್ಯಕ್ಷ ಟ್ರಂಪ್ ಮೇಲಿರುವ ಅಭಿಮಾನದಿಂದ ತಮ್ಮ ಮಗನಿಗೆ ಟ್ರಂಪ್ ಎಂದು ನಾಮಕರಣ ಮಾಡಲಾಗಿದೆ ಎಂದು ಮಗುವಿನ ತಂದೆ ಸಯೀದ್ ಅಸಾದುಲ್ಲ ಪೊಯಾ ಅವರು ಹೇಳಿದ್ದಾರೆ. ಫೇಸ್ ಬುಕ್ ನಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಕ್ಕೆ ಕಿಡಿಗೇಡಿಗಳು ಸಯೀದ್ ಅಸಾದುಲ್ಲ ಅವರಿಗೆ ಸಾಕಷ್ಟು ಬೆದರಿಕೆಗಳನ್ನು ಹಾಕಿದ್ದಾರಂತೆ.

 
ಈ ಆರೋಪ ತಳ್ಳಿಹಾಕಿರುವ ಸಯೀದ್‌, ತಾವು ಫೇಸ್‌ಬುಕ್‌ನಲ್ಲಿ ಮಗನ ಫೋಟೋ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರೋ ತಮ್ಮ ಕುಟುಂಬದ ಬಗ್ಗೆ ಗೊತ್ತಿರುವವರು ಈ ಫೇಸ್‌ಬುಕ್ ನಲ್ಲಿ ಈ ಫೋಟೋ ಹಾಕಿ ವಿವಾದ ಎಬ್ಬಿಸಿದ್ದಾರೆ. ಇದೀಗ, ನನ್ನ ಫೇಸ್‌ಬುಕ್‌ ಖಾತೆ ರದ್ದುಗೊಳಿಸಿದ್ದೇನೆ' ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ