ಟ್ರಂಪ್ ಜ್ಯೂನಿಯರ್ ದಾಂಪತ್ಯದಲ್ಲಿ ಬಿರುಕು;ವಿಚ್ಛೇದನಕ್ಕೆ ಅರ್ಜಿ

ಶನಿವಾರ, 17 ಮಾರ್ಚ್ 2018 (13:12 IST)
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಮತ್ತು ಅವರ ಪತ್ನಿ ವನೆಸ್ಸಾ ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.

 
ಈ ಕುರಿತು ಟ್ರಂಪ್ ಜ್ಯೂನಿಯರ್  ಹೇಳಿದ್ದು ಹೀಗೆ ‘12 ವರ್ಷಗಳ ದಾಂಪತ್ಯ ಜೀವನದ ನಂತರ ನಾವಿಬ್ಬರೂ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದೇವೆ. ನಮಗಿಬ್ಬರಿಗೂ ಪರಸ್ಪರರ ಬಗ್ಗೆಯೂ ಮತ್ತು ಇಬ್ಬರ ಕುಟುಂಬದ ಬಗ್ಗೆಯೂ ಗೌರವವಿದೆ. ನಮಗಿಬ್ಬರಿಗೆ ಐವರು ಮಕ್ಕಳಿದ್ದಾರೆ. ಅವರೇ ನಮ್ಮ ಮೊದಲ ಆದ್ಯತೆ.  ನಮ್ಮಿಬ್ಬರ ಖಾಸಗಿ ಬದುಕಿನ ಕುರಿತು ಹೆಚ್ಚು ಪ್ರಶ್ನಿಸಬೇಡಿ ಎಂದು  ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ