ಪ್ರಿಟ್ಝ್‌ಕರ್ ಆರ್ಕಿಟೆಕ್ಚರ್ ಪ್ರಶಸ್ತಿಗೆ ಭಾಜನರಾದ ಬಾಲಕೃಷ್ಣ ದೋಷಿ
ಶುಕ್ರವಾರ, 9 ಮಾರ್ಚ್ 2018 (07:02 IST)
ವಾಷಿಂಗ್ಟನ್: ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ(90) ಅವರು ಪ್ರಿಟ್ಝ್‌ಕರ್ ಆರ್ಕಿಟೆಕ್ಚರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುಣೆ ಮೂಲದವರಾದ ಬಾಲಕೃಷ್ಣ ದೋಷಿ ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ.
'ಬಾಲಕೃಷ್ಣ ದೋಷಿ ಅವರು ಗಂಭೀರವಾದ ವಾಸ್ತುಶಿಲ್ಪವನ್ನು ಸೃಷ್ಟಿಸುತ್ತ ಬಂದಿದ್ದಾರೆ. ಅತ್ಯುತ್ತಮ ಗುಣಮಟ್ಟ, ದೃಢವಾದ ಹೊಣೆಗಾರಿಕೆ ಮತ್ತು ತಮ್ಮ ದೇಶಕ್ಕೆ ಏನಾದರೂ ಕೊಡುಗೆ ನೀಡಲೇಬೇಕೆಂಬ ಹಂಬಲ ಅವರದ್ದಾಗಿತ್ತು. ಅವರು ಬರೇ ಕಟ್ಟಡಗಳ ವಿನ್ಯಾಸ ಮಾಡುತ್ತಿರಲಿಲ್ಲ, ಸಂಸ್ಥೆಗಳ ವಿನ್ಯಾಸ ಮಾಡುತ್ತಿದ್ದರು. ಹಲವಾರು ಸರಕಾರಿ ಮತ್ತು ಸಾರ್ವಜನಿಕ ಸೌಲಭ್ಯಗಳ ಕಟ್ಟಡಗಳು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ವಿನ್ಯಾಸಗಳನ್ನು ರಚಿಸಿದ್ದರು' ಎಂದು ಪ್ರಿಟ್ಝ್‌ಕರ್ ಆಯ್ಕೆದಾರರ ಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ