ಎಚ್ಚರಿಕೆ! ಸಾಕ್ಸ್ ವಾಸನೆ ತೆಗೆದುಕೊಂಡರೆ ಈ ಖಾಯಿಲೆ ಬರುವುದು ಖಂಡಿತ

ಗುರುವಾರ, 20 ಡಿಸೆಂಬರ್ 2018 (08:09 IST)
ಚೀನಾ : ಸಾಕ್ಸ್ ವಾಸನೆ ತೆಗೆದುಕೊಂಡ ಕಾರಣ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚೀನಾದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.


ಷೇಕ್ಸ್ ಪೆಂಗ್ (37 ವರ್ಷ) ಸಾಕ್ಸ್ ವಾಸನೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ಈತನಿಗೆ ಸಾಕ್ಸ್ ವಾಸನೆ ತೆಗೆದುಕೊಳ್ಳುವ ಅಭ್ಯಾಸವಿದೆ. ಇತ್ತೀಚೆಗೆ ಪೆಂಗ್ ಗೆ ಎದೆ ನೋವು ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರನ್ನು ಭೇಟಿಯಾದಾಗ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ವಿಚಾರ ತಿಳಿದುಬಂದಿದೆ.


ಆರಂಭದಲ್ಲಿ ನ್ಯುಮೋನಿಯಾ ಎಂದುಕೊಂಡ ವೈದ್ಯರಿಗೆ  ಚಿಕಿತ್ಸೆ ನಂತರವೂ ಪೆಂಗ್ ಗೆ ಸೋಂಕು ಕಡಿಮೆಯಾಗದ ಹಿನ್ನಲೆಯಲ್ಲಿ ಆತನ ಹವ್ಯಾಸದ ಬಗ್ಗೆ ಕೇಳಿದ್ದಾರೆ. ಧರಿಸುವ ಸಾಕ್ಸ್ ವಾಸನೆ ತೆಗೆದುಕೊಳ್ಳುವ ಹವ್ಯಾಸದ ಬಗ್ಗೆ ಆತ ಹೇಳಿದಾಗ ಆತನಿಗೆ ಪಲ್ಮನರಿ ಹೆಸರಿನ ಫಂಗಲ್ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಮನೆ ಹೊರಗೆ ಹಾಗೂ ಒಳಗೆ ಫಂಗಲ್ ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಬೇಗ ಹರಡುತ್ತದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ