ಈರುಳ್ಳಿ, ಬೆಳ್ಳುಳ್ಳಿ ತಿಂದು ಬಾಯಿ ಕೆಟ್ಟ ವಾಸನೆ ಬರುತ್ತಿದೆಯೇ? ಹಾಗಿದ್ದರೆ ಹೀಗೆ ಮಾಡಿ!
ಶನಿವಾರ, 27 ಅಕ್ಟೋಬರ್ 2018 (08:57 IST)
ಬೆಂಗಳೂರು: ಈರುಳ್ಳಿ, ಬೆಳ್ಳುಳ್ಳಿಯ ಕಡುವಾಸನೆ ಅಷ್ಟು ಬೇಗ ಬಾಯಿಂದ ಹೋಗಲ್ಲ. ಇದರಿಂದಾಗಿ ಯಾರೊಂದಿಗೂ ಬಾಯಿ ತೆರೆದು ಮಾತನಾಡುವಂತಿಲ್ಲ. ಹಾಗಿದ್ದರೆ ಏನು ಮಾಬಹುದು?
ಹಾಲು
ಕೆಲವು ತಜ್ಞರ ಪ್ರಕಾರ ಹಾಲು ಬಾಯಿಯ ಕಡು ವಾಸನೆಯನ್ನು ದೂರ ಮಾಡಲು ಸಹಾಯ ಮಾಡುತ್ತದಂತೆ. ಈರುಳ್ಳಿ, ಬೆಳ್ಳುಳ್ಳಿಯಂತಹ ಕಡು ವಾಸನೆಯಿರುವ ಆಹಾರ ಸೇವಿಸಿದ ಬಳಿಕ ಒಂದು ಲೋಟ ಹಾಲು ಸೇವಿಸಿ.
ಆಪಲ್
ದಂತ ವೈದ್ಯರು ಹೇಳುವಂತೆ ಆಪಲ್ ಬಾಯಿಯಲ್ಲಿ ಸಲ್ಫರ್ ಅಂಶ ಕಡಿಮೆಮಾಡುತ್ತದೆ. ಇದರಿಂದ ಕೆಟ್ಟ ವಾಸನೆ ಕಡಿಮೆ ಮಾಡುತ್ತದೆ. ಹೀಗಾಗಿ ಆಪಲ್ ಅಥವಾ ಅದರ ಜ್ಯೂಸ್ ಸೇವಿಸಿ.
ನೀರು
ಸರಳವಾಗಿ ಕಡುವಾಸನೆ ತೊಲಗಿಸಲು ಮಾಡಬಹುದಾದ ಉಪಾಯವೆಂದರೆ ಹದ ಬಿಸಿ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು.
ನಿಂಬೂ ಪಾನೀಯ
ನಿಂಬೆಯಲ್ಲಿರುವ ಸಿಟ್ರಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಅಂಶ ಕಡುವಾಸನೆ ವಿರುದ್ಧ ಹೋರಾಡುವ ಪ್ರಬಲ ಅಂಶ. ಹದ ಬಿಸಿನೀರಿಗೆ ನಿಂಬೆ ರಸವನ್ನು ಬೆರೆಸಿ ಸೇವಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.