ಕೊಲ್ಲಲ್ಪಟ್ಟ ಉಗ್ರರು ಪಾಕ್‌ನವರು ಎಂಬುದಕ್ಕೆ ಪ್ರಮುಖ ಸಾಕ್ಷಿ ಕೊಟ್ಟ ಅಮಿತ್ ಶಾ

Sampriya

ಮಂಗಳವಾರ, 29 ಜುಲೈ 2025 (18:25 IST)
Photo Credit X
ನವದೆಹಲಿ: ಮಂಗಳವಾರ ಲೋಕಸಭೆಯಲ್ಲಿ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಭಾಗವಹಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಂಗಳವಾರ ಸಾವನ್ನಪ್ಪಿದ ಮೂವರು ಉಗ್ರರು ಪಹಲ್ಗಾಮ್ ದಾಳಿಕೋರರು ಎಂದು ಸ್ಪಷ್ಟಪಡಿಸಿದರು. 

ಪಹಲ್ಗಾಮ್ ಭಯೋತ್ಪಾದಕರು ಸ್ವದೇಶಿಗಳಾಗಿರಬಹುದೆಂಬ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಅವರ ಬಳಿ ವೋಟರ್ ಐಡಿಗಳು ಮತ್ತು ಪಾಕಿಸ್ತಾನಿ ನಿರ್ಮಿತ ಚಾಕೊಲೇಟ್ ಹೊದಿಕೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭಯೋತ್ಪಾದಕರ ಇಸ್ಲಾಮಾಬಾದ್ ಸಂಪರ್ಕಕ್ಕೆ ಪುರಾವೆಗಳಿವೆ ಎಂದು ಹೇಳಿದರು. 

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಪೈಕಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉನ್ನತ ಕಮಾಂಡರ್ ಸುಲೇಮಾನ್ ಶಾ, ಆಪರೇಷನ್ ಮಹಾದೇವ್ ಸಮಯದಲ್ಲಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಲ್ಲಿ ಸೇರಿದ್ದಾರೆ ಎಂದು ಗೃಹ ಸಚಿವರು ದೃಢಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ