ಒಂದೂವರೆ ಗಂಟೆಗೆ ಅಂತ್ಯಗೊಂಡ ಹ್ಯಾರಿಸ್ ಅಧ್ಯಕ್ಷಗಿರಿ! ಮುಂದೇನಾಯ್ತು?

ಭಾನುವಾರ, 21 ನವೆಂಬರ್ 2021 (13:00 IST)
ವಾಷಿಂಗ್ಟನ್ : ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗುವ ಅವಕಾಶ ಪಡೆದ ಕೆಲವೇ ಸಮಯದಲ್ಲಿ ಆ ಮಹತ್ವದ ಹುದ್ದೆಯಿಂದ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ವಂಚಿತರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆಯಬೇಕಿದ್ದ ಅಧ್ಯಕ್ಷ ಜೋ ಬೈಡನ್ ಅವರು ಭಾರತ ಮೂಲದವರಾದ ಕಮಲಾ ಹ್ಯಾರಿಸ್ ಅವರಿಗೆ ಅಲ್ಪಾವಧಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಆದರೆ ಒಂದೂವರೆ ಗಂಟೆಯೊಳಗೇ ಬೈಡನ್ ಮರಳಿ ಅಧಿಕಾರ ವಹಿಸಿಕೊಂಡಿದ್ದಾರೆ.
79 ವರ್ಷದ ಅಧ್ಯಕ್ಷ ಜೋ ಬೈಡನ್ ಅವರು ಕೊಲೊನೊಸ್ಕೋಪಿಯ ತಪಾಸಣೆಗಾಗಿ ಅನಸ್ತೇಶಿಯಾ ಪಡೆದುಕೊಂಡಿದ್ದರು. ಈ ವೇಳೆ ಕೆಲವು ದಿನಗಳ ಮಟ್ಟಿಗೆ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಾಗಿತ್ತು. ಈ ಮೂಲಕ ಅವರು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗಿ ಗುರುತಿಸಿಕೊಳ್ಳುವ ಅವಕಾಶ ಪಡೆದಿದ್ದರು. ಬೈಡನ್ ಅವರು ತಪಾಸಣೆ ಬಳಿಕ ಚಿಕಿತ್ಸೆ ಪಡೆದು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿತ್ತು.
ಆದರೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಧ್ಯಕ್ಷೀಯ ಅವಧಿ 1 ಗಂಟೆ ಮತ್ತು 25 ನಿಮಿಷಗಳಿಗೆ ಅಂತ್ಯಗೊಂಡಿದೆ. ಜೋ ಬೈಡನ್ ಅವರು ಬೆಳಿಗ್ಗೆ 11.35ರ ವೇಳೆಗೆ ಬೈಡನ್ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ