ಪ್ರೇಮಿಗಳ ದಿನಕ್ಕೆ ನೀವು ಕೊಡಬಹುದಾದ ಬೆಸ್ಟ್ ಗಿಫ್ಟ್

Krishnaveni K

ಬುಧವಾರ, 14 ಫೆಬ್ರವರಿ 2024 (09:00 IST)
ಬೆಂಗಳೂರು: ಕೊನೆಗೂ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಪ್ರೇಮಿಗಳ ದಿನ ಬಂದೇ ಬಿಡ್ತು. ವಿಶ್ವದಾದ್ಯಂತ ಇಂದು ಪ್ರೇಮಿಗಳು ವಿಶಿಷ್ಟವಾಗಿ ಇಂದಿನ ದಿನ ಕಳೆಯಲು ಕಾಯುತ್ತಿದ್ದಾರೆ.

ಪ್ರೇಮಿಗಳ ದಿನ ಎಂದರೆ ಸಂಗಾತಿಗೆ ಒಂದು ಒಳ್ಳೆಯ ಉಡುಗೊರೆ ಕೊಡಲೇಬೇಕಲ್ವಾ? ಸಂಗಾತಿಯು ನೀಡುವ ಸುಂದರ ಉಡುಗೊರೆಯನ್ನು ಕಾಪಾಡಿಕೊಳ್ಳುವುದರಲ್ಲೂ ಒಂದು ಮಜಾ ಇರುತ್ತದೆ. ಆದರೆ ಪ್ರೇಮಿಗಳ ಮುಖದಲ್ಲಿ ನಗು ಮೂಡಬೇಕಾದರೆ ಯಾವ ಗಿಫ್ಟ್ ಕೊಡಬೇಕು? ಅದಕ್ಕೆ ಕೆಲವೊಂದು ಐಡಿಯಾ ಇಲ್ಲಿದೆ ನೋಡಿ.

ಹೂ ಮಳೆ ಸುರಿಸಿ
ಹೂ ಎಂದರೆ ಅದರಲ್ಲೂ ಗುಲಾಬಿ ಹೂ ಎಂದರೆ ಪ್ರೇಮಿಗಳಿಗೆ ಬಲು ಇಷ್ಟ. ಇದು ಪ್ರೇಮದ ಸಂಕೇತವೂ ಹೌದು. ಹೀಗಾಗಿ ಗುಲಾಬಿ ಹೂವನ್ನೇ ಉಡುಗೊರೆಯಾಗಿ ನೀಡಬಹುದು.
ಜ್ಯುವೆಲ್ಲರಿ
ಮಹಿಳೆಯರು ಆಭರಣ ಪ್ರಿಯರು. ಹಾಗಾಗಿ ನೆಕ್ಲೇಸ್, ಕಿವಿಯೋಲೆ, ಕಾಲ್ಗೆಜ್ಜೆ ಮುಂತಾದ ಆಭರಣವನ್ನು ಖರೀದಿ ನೀವೇ ಕೈಯಾರೆ ತೊಡಿಸಬಹುದು. ಪುರುಷರಿಗಾದರೆ ಕೈ ಚೈನು ಅಥವಾ ಸರವನ್ನೂ ಗಿಫ್ಟ್ ಮಾಡಬಹುದು.
ಹಾಡಿನ ಉಡುಗೊರೆ
ಪ್ರೀತಿಯಲ್ಲಿ ಬಿದ್ದಾಗ ಹಾಡುಗಗಾರರು, ಕವಿಗಳಾಗುವುದು ಸಹಜ. ಹೀಗಾಗಿ ನಿಮ್ಮ ಸಂಗಾತಿಗಾಗಿ ನೀವೇ ಒಂದು ಕವನ ಅಥವಾ ಹಾಡು ಬರೆದು ಗಿಫ್ಟ್ ಮಾಡಿ.
ಇಷ್ಟದ ಸ್ಥಳಕ್ಕೆ ಕರದೊಯ್ಯಿರಿ
ಆಕೆ’/ಆತ ಬಹು ದಿನಗಳಿಂದ ಆಸೆಪಡುತ್ತಿದ್ದ ಜಾಗಕ್ಕೆ ಕರೆದೊಯ್ದು ಸರ್ಪೈಸ್ ಕೊಡಿ. ಜೊತೆಗೆ ಬೈಕ್ ನಲ್ಲಿ ಪ್ರಯಾಣಿಸಿದರೆ ಅದರ ಮಜವೇ ಬೇರೆ.
ಇಷ್ಟ ವಸ್ತುಗಳು
ನಿಮ್ಮ ಸಂಗಾತಿ ಇಷ್ಟಪಡುವ ವಾಚ್, ಮೊಬೈಲ್, ಡ್ರೆಸ್, ಕೀ ಚೈನ್ ಹೀಗೆ ಅವರ ಫೇವರಿಟ್ ಆಗಿರುವ ವಸ್ತುವನ್ನು ಗಿಫ್ಟ್ ಮಾಡಿ ಖುಷಿಕೊಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ