ವಾಲಂಟೈನ್ಸ್ ಡೇ ಹಿಂದಿನ ದಿನದ ವಿಶೇಷತೆ ತಿಳಿಯಿರಿ

Krishnaveni K

ಮಂಗಳವಾರ, 13 ಫೆಬ್ರವರಿ 2024 (11:36 IST)
ಬೆಂಗಳೂರು: ಪ್ರೇಮಿಗಳ ದಿನಾಚರಣೆಗೆ ಮೊದಲು ನಿಮ್ಮ ಪ್ರೀತಿಯ ಸಂಗಾತಿಗೆ ಮುತ್ತಿನ ಮಳೆಗರೆಯಲು ಇಂದು ಕಿಸ್ ಡೇ ಆಚರಿಸಲಾಗುತ್ತಿದೆ.

ವಾಲೆಂಟೈನ್ಸ್ ಡೇಗೆ ಮೊದಲು ಒಂದೊಂದು ದಿನ ಒಂದೊಂದು ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಪ್ರಪೋಸ್ ಡೇ, ಚಾಕಲೇಟ್ ಡೇ, ಟೆಡ್ಡಿ ಡೇ, ಅಪ್ಪುಗೆಯ ದಿನ ಇತ್ಯಾದಿ. ನಿನ್ನೆ ಅಪ್ಪುಗೆಯ ದಿನ ಆಚರಿಸಲಾಗಿತ್ತು. ಇಂದು ಸಿಹಿ ಮುತ್ತಿನ ದಿನ. ನಿಮ್ಮ ಇಷ್ಟದ ಸಂಗಾತಿಗೆ ಸಿಹಿ ಮುತ್ತು ನೀಡಿ ಇಂದಿನ ದಿನವನ್ನು ಸ್ವಾಗತಿಸಿ.

ಮುತ್ತಿನ ದಿನದ ವಿಶೇಷ
ವಾಲೆಂಟೈನ್ ವೀಕ್ ನ ಪ್ರತಿಯೊಂದು ದಿನವೂ ಪ್ರೇಮಿಗಳ ಪಾಲಿಗೆ ಹಬ್ಬದ ದಿನ. ಪರಸ್ಪರ ಪ್ರೀತಿ ವಿನಿಮಯ ಮಾಡಿಕೊಳ್ಳಲು ಪ್ರಪೋಸ್ ಮಾಡುವುದು, ಗುಲಾಬಿ ಹೂ ಕೊಡುವುದು, ಚಾಕಲೇಟ್ ಗಿಫ್ಟ್ ಮಾಡುವುದರಂತೇ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಮುತ್ತು ಅತ್ಯುತ್ತಮ ಸಾಧನ.

ಪ್ರೀತಿಯಲ್ಲಿ ಬಿದ್ದ ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಸಿಹಿ ಮುತ್ತು ನೀಡಲು ಕಾದಿರುತ್ತಾರೆ.  ಮೊದಲ ಪ್ರೀತಿ, ಮೊದಲು ಪ್ರಪೋಸ್ ಮಾಡಿದ ಗಳಿಗೆ ಎನ್ನುವಂತೆ ಮೊದಲು ಮುತ್ತು ನೀಡಿದ ಗಳಿಗೆಯೂ ಸ್ಪೆಷಲ್ ಆಗಿರುತ್ತದೆ.  ಹೀಗಾಗಿ ಇಂದು ನಿಮ್ಮ ಸಂಗಾತಿಯ ಮೇಲೆ ನಿಮಗೆಷ್ಟು ಪ್ರೀತಿಯಿದೆ ಎಂದು ತೋರಿಸಲು ಸಿಹಿ ಮುತ್ತೊಂದನ್ನು ನೀಡಿ ಇಂದಿನ ದಿನವನ್ನು ಜೊತೆಯಾಗಿ ಕಳೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ