ಭಾರತದ ಕೊವಿಡ್ ಲಸಿಕೆಗೆ ಬ್ರೆಜಿಲ್ ನಿಂದ ಬೇಡಿಕೆ

ಭಾನುವಾರ, 10 ಜನವರಿ 2021 (09:06 IST)
ನವದೆಹಲಿ: ಭಾರತದಲ್ಲಿ ತಯಾರಿಸಲಾದ ಕೊವಿಡ್ ಲಸಿಕೆಗೆ ಈಗ ಬ್ರೆಜಿಲ್ ನಿಂದಲೂ ಬೇಡಿಕೆ ಬಂದಿದೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ 20 ಲಕ್ಷ ಕೊವಿಶೀಲ್ಡ್ ಲಸಿಕೆ ನೀಡುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.


ಭಾರತದಲ್ಲಿ ಲಸಿಕೆ ವಿತರಣೆ ಮಾಡಲು ದಿನ ನಿಗದಿಯಾಗಿದೆ. ಇದರ ಬೆನ್ನಲ್ಲೇ ಬ್ರೆಜಿಲ್ ಅಧ್ಯಕ್ಷರು ಸ್ವತಃ ಪ್ರಧಾನಿ ಮೋದಿಗೆ ಪತ್ರ ಮುಖೇನ ಲಸಿಕೆ ನೀಡುವಂತೆ ಮನವಿ ಮಾಡಿರುವುದು ವಿಶೇಷ. ಭಾರತದಲ್ಲಿ ವಿತರಣೆಗೆ ತೊಂದರೆಯಾಗದಂತೆ ನಮಗೆ 20 ಲಕ್ಷ ಲಸಿಕೆ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ