ಒಂದೇ ಶಾಲೆಯ 100 ವಿದ್ಯಾರ್ಥಿಗಳಿಗೆ ಕ್ಯಾನ್ಸರ್!

ಸೋಮವಾರ, 18 ಏಪ್ರಿಲ್ 2022 (09:26 IST)
ನ್ಯೂಜೆರ್ಸಿ :  ನ್ಯೂಜೆರ್ಸಿಯ ವುಡ್ಬ್ರಿಡ್ಜ್ನಲ್ಲಿರುವ ಕೊಲೋನಿಯಾ ಹೈ-ಸ್ಕೂಲ್ನಲ್ಲಿ ವ್ಯಾಸಂಗ ಮಾಡಿರುವ ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಅತ್ಯಪರೂಪದ ಗ್ಲಿಯೋಬ್ಲಾಸ್ಟೋಮಾ ಹೆಸರಿನ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
 
ಶಾಲೆಯ ಹಳೆಯ ವಿದ್ಯಾರ್ಥಿ, ಕ್ಯಾನ್ಸರ್ನಿಂದ ಗುಣಮುಖರಾದ ಅಲ್ ಲುಪಿಯಾನೋ ಎಂಬವರು ಈ ರಹಸ್ಯ ಬೇಧಿಸಲು ಅಧ್ಯಯನ ನಡೆಸಿದ ಬಳಿಕ ಈ ಬೆಳವಣಿಗೆ ಬಹಿರಂಗಗೊಂಡಿದೆ. ಲುಪಿಯಾನೋ ಸಹೋದರಿ, ಪತ್ನಿ ಸಹ ಗ್ಲಿಯೋಬ್ಲಾಸ್ಟೋಮಾಗೆ ತುತ್ತಾಗಿದ್ದರು.

ಅಲ್ಲದೆ 1975ರಿಂದ 2000ರ ವರೆಗೆ ವುಡ್ಬ್ರಿಡ್ಜ್ ಶಾಲೆಯಲ್ಲಿ ಅಧ್ಯಯನ ಮಾಡಿರುವ 102 ಮಂದಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಹೀಗಾಗಿ ಈ ರೋಗದ ಹಿಂದಿನ ಕಾರಣವನ್ನು ಪತ್ತೆ ಮಾಡೇ ಮಾಡುತ್ತೇನೆ ಎಂದು ಅವರು ಸವಾಲೆಸೆದಿದ್ದಾರೆ.

ತಜ್ಞರ ಪ್ರಕಾರ ಗ್ಲಿಯೋಬ್ಲಾಸ್ಟೋಮಾ ಎಂಬುದು ತೀರಾ ವಿರಳವಾಗಿ ಕಂಡುಬರುವ ಅತ್ಯಂತ ಅಪಾಯಕಾರಿ ಕ್ಯಾನ್ಸರ್. ಒಂದು ಲಕ್ಷದ ಪೈಕಿ ಕೇವಲ ಶೇ.3.21ರಷ್ಟುಜನರಲ್ಲಿ ಮಾತ್ರ ಪತ್ತೆಯಾಗುತ್ತದೆ.

ಹೀಗಾಗಿ ವುಡ್ಬ್ರಿಡ್ಜ್ನಲ್ಲಿ ವ್ಯಾಪಕವಾಗಿ ಕ್ಯಾನ್ಸರ್ ಹರಡಲು ಕಾರಣವೇನೆಂದು ಪತ್ತೆಹಚ್ಚಲು ಅಲ್ಲಿನ ಮೇಯರ್ ತನಿಖೆಗೆ ಆದೇಶಿಸಿದ್ದಾರೆ. ಈ ಬೆನ್ನಲ್ಲೇ ಅಧಿಕಾರಿಗಳು ಶಾಲೆಯ 28 ಎಕರೆ ಪ್ರದೇಶದಲ್ಲಿ ರೇಡಿಯೊಲಾಜಿಕಲ… ಪರೀಕ್ಷೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ