ಹಣ್ಣು ಸಮೃದ್ಧ ನ್ಯೂಟ್ರಿಯಂಟ್ಸ್ ಮತ್ತು ಪೋಷಕಾಂಶಗಳಿಂದ ತುಂಬಿದ್ದು ಇದನ್ನು ಸೇವಿಸುವುದರಿಂದ ಹಲವು ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ.
ವಾದ ಒಂದು ಹಣ್ಣಾಗಿದೆ. ಉಷ್ಣ ಅನಾನಸ್ ಹಣ್ಣನ್ನು ಇಷ್ಟಪಡದವರು ತುಂಬಾ ವಿರಳ, ಈ ಹಣ್ಣಿನಿಂದ ಸಲಾಡ್, ಹೋಳಿಗೆ, ಉಪ್ಪಿನಕಾಯಿ, ಜಾಮ್, ಜ್ಯೂಸ್, ಸಾರು, ಐಸ್ಕ್ರೀಮ್ ಹೀಗೆ ನಾನಾ ರುಚಿಯ ಆಹಾರ ಮಾಡಿ ಸವಿಯಬಹುದು.
ಈ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ.
ಅನಾನಸು ಹಣ್ಣು ನೋಡಲು ಮುಳ್ಳು ಮತ್ತು ಒರಟಿನಿಂದ ಕೂಡಿದ್ದರೂ ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಅನಾನಸು ಹಣ್ಣನ್ನು ಆರೋಗ್ಯ ಮತ್ತು ರುಚಿಕರ
ರೋಗ ನಿರೋಧಕ
ಅನಾನಸು ಹಣ್ಣು ಆ್ಯಂಟಿ ಆ್ಯಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಆ್ಯಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅನಾನಸು ಹೊಂದಿದೆ. ಇದು ಆ್ಯಂಟಿ ಆಕ್ಸಿಡೆಂಟ್ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್ ಆ್ಯಸಿಡ್ಗಳನ್ನು ಹೊಂದಿದೆ. ಅನಾನಸು ದೀರ್ಘಾವದಿಯ ಪರಿಣಾಮ ನಿವಾರಿಸುತ್ತದೆ.
ಪೌಷ್ಟಿಕ ಆಹಾರ
ಅನಾನಸು ಹಣ್ಣು ಅತೀ ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿದ್ದು, ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿದೆ. ಅನಾನಸು ಸೇವನೆಯಿಂದ ಪ್ರೋಟೀನ್, ಕಾರ್ಬೋ ಹೈಡ್ರೇಟ್ಸ್, ಫೈಬರ್, ಪೊಟಾಶಿಯಂ, ಕೊಬ್ಬಿನಾಂಶ, ವಿಟಮಿನ್ ಸಿ, ತಾಮ್ರ, ಥೈಯಾಮಿನ್ನ ಅಂಶಗಳು ದೇಹಕ್ಕೆ ಲಭಿಸುತ್ತದೆ.
ಶೀತ ಮತ್ತು ಕೆಮ್ಮು ನಿವಾರಣೆ
ನೀವು ವಿಪರೀತ ಶೀತದಿಂದ ಬಳಲುತ್ತಿದ್ದರೆ ಅನಾನಸ್ ಸೇವಿಸಬಹುದು. ಏಕೆಂದರೆ ಈ ಹಣ್ಣನಲ್ಲಿ ಬ್ರೋಮಲೇನ್1 ಎಂಬ ಅಂಶವಿದ್ದು ಇದು ಸೊಂಕು ತರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ನೆಗಡಿ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಬೇಕು.
ಮೂಳೆಗಳನ್ನು ಬಲಪಡಿಸುತ್ತದೆ
ಅನಾನಸ್ ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯಮಾಡುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಾಯ ಮಾಡುತ್ತದೆ.
ಕಣ್ಣಿನ ಆರೋಗ್ಯ
ನಮಗೆ ವಯಸ್ಸಾದಂತೆ ಕಣ್ಣಿನ ಮೇಲೆ ಪರಿಣಾಮ ಬೀರುವ ರೋಗಗಳನ್ನು ಅನಾನಸ್ ಸೇವಿಸುವುದರಿಂದ ತಡೆಗಟ್ಟಬಹುದು. ಇದರಲ್ಲಿನ ವಿಟಮಿನ ಎ ಮತ್ತು ಸಿ ಸತ್ವ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ದೃಷ್ಠಿಯನ್ನು ಹೆಚ್ಚಿಸುತ್ತದೆ. ಕಣ್ಣಿನ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ.
ಒತ್ತಡ
ಅನಾನಸ್ನಲ್ಲಿ ವಿಟಮಿನ್ ಬಿ ಇದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ತುಂ ಬಾ ಮಾನಸಿಕ ಒತ್ತಡವಿದ್ದಾಗ ಒಂದು ಬೌಲ್ ಅನಾನಸ್ ತಿನ್ನಿ, ನಿಮ್ಮ ಆಲೋಚನೆಗಳನ್ನು ಹೊರದೂಡಿ, ನಿಮ್ಮನ್ನು ರಿಲ್ಯಾಕ್ಸ್ ಮಾಡುವುದು.
ಕ್ಯಾನ್ಸರ್
ಅನಾನಸ್ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ ಹೀಗಾಗಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಮೊಡವೆ ನಿವಾರಣೆ
ಅನಾನಸ್ ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ, ಇನ್ನು ಇದನ್ನು ಫೇಶಿಯಲ್ ಮಾಸ್ಕ್ ಆಗಿಯೂ ಬಳಸಬಹುದು. ಒಂದು ತುಂಡು ಅನಾನಸ್ ತೆಗೆದುಕೊಂಡು ಅದರ ರಸವನ್ನು ಮುಖಕ್ಕೆ ಹಚ್ಚಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖ ಕಾಂತಿ ಹೆಚ್ಚುವುದು.