ಬೀಜಿಂಗ್ : ಜನಸಂಖ್ಯೆಯಲ್ಲಿ ಭಾರತ, ಚೀನಾವನ್ನ ಹಿಂದಿಕ್ಕಿದ ನಂತರ ಚೀನಾ ಸರ್ಕಾರ (ತನ್ನ ದೇಶದಲ್ಲಿ ಹೆಚ್ಚು ಮಕ್ಕಳನ್ನ ಹೆರಲು ಪ್ರೋತ್ಸಾಹ ನೀಡುತ್ತಿದೆ. 3ನೇ ಮಗು ಹೊಂದಲು ಉಚಿತ ಸಬ್ಸಿಡಿಗಳನ್ನು ನೀಡಲು ಮುಂದಾಗಿದೆ.
ಜೊತೆಗೆ ವಸತಿ ಸೌಲಭ್ಯ ಹಾಗೂ ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳನ್ನ ಕಲ್ಪಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಚೀನಾ 1980 ರಿಂದ 2015ರ ವರೆಗೆ ಒಂದು ಮಗು ನೀತಿಯನ್ನ ಜಾರಿಗೆ ತಂದಿತ್ತು. ಆದರೆ ಭಾರತವು ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾದ ನಂತರ ಚೀನಾ ಮಕ್ಕಳ ಮಿತಿಯನ್ನು 3ಕ್ಕೆ ಹೆಚ್ಚಿಸಿದೆ. ಹೆಚ್ಚು ಮಕ್ಕಳನ್ನು ಹೊಂದುವ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಅದಕ್ಕಾಗಿಯೇ ಸೌಹಾರ್ದಯುತ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಲು, ಮದುವೆಯಾಗಲು ಮತ್ತು ಮಕ್ಕಳನ್ನು ಹೆರುವ ಸಂಸ್ಕೃತಿಯಲ್ಲಿ ಹೊಸ ಬದಲಾವಣೆ ತರಲು ಚೀನಾ 20ಕ್ಕೂ ಹೆಚ್ಚು ನಗರಗಳಲ್ಲಿ `ಹೊಸ-ಯುಗ ಯೋಜನೆಯನ್ನ ಪ್ರಾರಂಭಿಸುತ್ತಿದೆ. ಇದು ಚೀನಾದಲ್ಲಿ ಜನನ ದರ ಹೆಚ್ಚಿಸಲು ಕೈಗೊಂಡ ನೂತನ ಕ್ರಮವಾಗಿದೆ.