ಭಾರತದ ಪತ್ರಕರ್ತನಿಗೆ ದೇಶ ತೊರೆಯುವಂತೆ ಸೂಚಿಸಿದ ಚೀನಾ!

ಬುಧವಾರ, 14 ಜೂನ್ 2023 (10:29 IST)
ಬೀಜಿಂಗ್ : ವರದಿ ಮಾಡುತ್ತಿದ್ದ ಕೊನೆಯ ಭಾರತದ ಪತ್ರಕರ್ತನಿಗೆ ದೇಶವನ್ನು ತೊರೆಯುವಂತೆ ಚೀನಾ ಸೂಚಿಸಿದೆ.
 
ಕೋವಿಡ್ 19 ಬಳಿಕ ವಿದೇಶಿ ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ್ದರೂ ಚೀನಾದಲ್ಲಿ ಭಾರತದ ಮಾಧ್ಯಮಗಳು ಕೆಲಸ ಮಾಡುತ್ತಿದ್ದವು.

ಪ್ರಸಾರ ಭಾರತಿಯ ಇಬ್ಬರು ಮತ್ತು ಹಿಂದೂ ಪತ್ರಿಕೆಯ ವರದಿಗಾರರ ವೀಸಾವನ್ನು ಈ ವರ್ಷದ ಏಪ್ರಿಲ್ನಲ್ಲಿ ಚೀನಾ ನವೀಕರಿಸಿರಲಿಲ್ಲ. ಈಗ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ವರದಿಗಾರನಿಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ.  

 
ಕೊರೊನಾ ಸೃಷ್ಟಿಕರ್ತ ದೇಶವಾದ ಚೀನಾದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಸರ್ಕಾರದ ಎಡವಟ್ಟುಗಳು ವಿಶ್ವಕ್ಕೆ ತಿಳಿಯಬಾರದು ಎಂದು ಬಹಳ ಮಾಧ್ಯಮಗಳಿಗೆ ಬಹಳ ಷರತ್ತು ವಿಧಿಸುತ್ತದೆ. ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್ಸೈಟ್ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್ಸೈಟ್ಗಳ ಮೇಲೆ ಚೀನಿ ಸರ್ಕಾರ ಈ ಹಿಂದೆಯೇ ಸೆನ್ಸಾರ್ ಕತ್ತರಿ ಪ್ರಯೋಗಿಸಿತ್ತು.

ಇಂಟರ್ನೆಟ್ ಸೆನ್ಸಾರ್ ಮಾಡುವ ವಿಚಾರದಲ್ಲಿ ವಿಶ್ವದಲ್ಲೇ ಚೀನಾ ಸದಾ ಮುಂದು. ಈಗಾಗಲೇ ಇಲ್ಲಿ ಫೇಸ್ಬುಕ್, ವಾಟ್ಸಪ್, ಯೂಟ್ಯೂಬ್ಗಳು ಸೇರಿದಂತೆ ಹಲವು ತಾಣಗಳು ನಿಷೇಧವಾಗಿದೆ. ಸುದ್ದಿ ತಾಣಗಳಾದ ಬ್ಲೂಮ್ ಬರ್ಗ್, ದಿ ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಟೈಮ್ಸ್ ಸಹ ಬ್ಲಾಕ್ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ