ಭಾರತದೊಂದಿಗೆ ಆತ್ಮಿಯವಾದರೆ ಜಾಗೃತೆ: ನೇಪಾಳಕ್ಕೆ ಚೀನಾ ಎಚ್ಚರಿಕೆ

ಮಂಗಳವಾರ, 20 ಸೆಪ್ಟಂಬರ್ 2016 (15:27 IST)
ನೇಪಾಳ ಪ್ರಧಾನಿ ಪ್ರಚಂಡಾ ಭಾರತಕ್ಕೆ ಭೇಟಿ ನೀಡಿದ ಕೆಲವೇ ದಿನಗಳ ನಂತರ ಭಾರತೊಂದಿಗೆ ಆತ್ಮಿಯ ಸಂಬಂಧ ಬೆಳೆಸಿದಲ್ಲಿ ಜಾಗೃತೆ ಎಂದು ಚೀನಾ ಎಚ್ಚರಿಕೆ ನೀಡಿದೆ.
 
ಭಾರತದೊಂದಿಗಿನ ಆತ್ಮಿಯತೆಯಲ್ಲಿ ಹೆಚ್ಚಳ ಮತ್ತು ಚೀನಾದೊಂದಿಗೆ ಅಲ್ಪಮೈತ್ರಿ ತೋರಿದಲ್ಲಿ ಗಂಬೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದೆ.
 
ಚೀನಾ ಸರಕಾರಕ್ಕೆ, ನೇಪಾಳ ಸರಕಾರದೊಂದಿಗೆ ಮೂಲಸೌಕರ್ಯ ಕ್ಷೇತ್ರಗಳಾದ ಬ್ರಿಕ್ ಆಂಡ್ ರೋಡ್ ಯೋಜನೆಗೆ ಧಕ್ಕೆಯಾಗಲಿದೆ ಎನ್ನುವ ಆತಂಕ ಕಾಡುತ್ತಿದೆ.   
 
ನೇಪಾಳದ ಸಂವಿಧಾನ ತಿದ್ದುಪಡಿ ವಿರೋಧಿಸಿ ಮಾದೇಸಿ ಸಮುದಾಯ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಭಾರತ ಮತ್ತು ನೇಪಾಳ ಮಧ್ಯೆ ಪರಿಸ್ಥಿತಿ ವಿಷಮಗೊಂಡ ಸಂದರ್ಭದಲ್ಲಿ ಮಾಜಿ ಪ್ರಧಾನಿ ಕೆ.ಪಿ.ಓಲಿ ಸರಕಾರದೊಂದಿಗೆ ಚೀನಾ ಒಪ್ಪಂದ ಮಾಡಿಕೊಂಡಿತ್ತು.
 
ಇದೀಗ, ನೇಪಾಳ-ಚೀನಾ ಸಂಬಂಧಗಳು ಹದಗೆಟ್ಟಿದ್ದು, ಚೀನಾ ನಾಯಕರು ನೇಪಾಳಕ್ಕೆ ಭೇಟಿ ನೀಡುವ ಕಾರ್ಯಕ್ರಮಗಳನ್ನು ನೇಪಾಳ ಸರಕಾರ ರದ್ದುಗೊಳಿಸಿರುವುದು ಚೀನಾ ಸರಕಾರಕ್ಕೆ ಆಕ್ರೋಶ ಉಂಟು ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ