ಅಮೆರಿಕಾ ಪರ ವಹಿಸಿದರೆ ಜೋಕೆ! ಭಾರತಕ್ಕೆ ಚೀನಾ ಎಚ್ಚರಿಕೆ

ಸೋಮವಾರ, 1 ಜೂನ್ 2020 (11:21 IST)
ನವದೆಹಲಿ: ಕೊರೋನಾ ಬಳಿಕ ಚೀನಾ-ಅಮೆರಿಕಾ ಸಂಬಂಧ ಸಂಘರ್ಷ ತಾರಕಕ್ಕೇರಿದ್ದು, ಉಭಯ ರಾಷ್ಟ್ರಗಳ ನಡುವಿನ ಗುದ್ದಾಟದಲ್ಲಿ ಭಾರತ ಮಧ್ಯಪ್ರವೇಶಿಸದಂತೆ ಚೀನಾ ಎಚ್ಚರಿಕೆ ನೀಡಿದೆ.


ಕೊರೋನಾ, ವಿಶ್ವ  ಸಂಸ್ಥೆಯಲ್ಲಿ ಚೈನಾ ಪ್ರಾಬಲ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಅಮೆರಿಕಾ ಚೀನಾ ವಿರುದ್ಧ ತಿರುಗಿಬಿದ್ದಿದೆ. ಹೀಗಾಗಿ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.

ಆದರೆ ಈ ಇಬ್ಬರ ನಡುವಿನ ಗುದ್ದಾಟದ ನಡುವೆ ಭಾರತ ಅಮೆರಿಕಾ ಪರ ವಕಾಲತ್ತು ನಡೆಸುವುದು ಬೇಡ. ಒಂದು ವೇಳೆ ಅನಗತ್ಯವಾಗಿ ನಮ್ಮಿಬ್ಬರ ನಡುವೆ ಮೂಗು ತೂರಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ