ಸುತ್ತಿ ಬಳಸಿ ಅರುಚಾಲ ಗಡಿ ವಿವಾದ ಕೆದಕುತ್ತಿರುವ ಚೀನಾ

ಮಂಗಳವಾರ, 7 ಜುಲೈ 2020 (08:59 IST)
ಬೀಜಿಂಗ್: ಲಡಾಖ್, ಗಲ್ವಾನ್ ವ್ಯಾಲಿಯಲ್ಲಿ ಗಡಿ ಕ್ಯಾತೆ ತೆಗೆದ ಚೀನಾ ಮತ್ತೆ ತನ್ನ ಹಳೆಯ ಅರುಚಾಲ ಪ್ರದೇಶದ ಗಡಿ ವಿವಾದದ ಬಗ್ಗೆ ಭಾರತವನ್ನು ಪರೋಕ್ಷವಾಗಿ ಕೆಣಕುವ ಯತ್ನ ಮಾಡಿದೆ.


ಭೂತಾನ್ ಜತೆಗೆ ಚೀನಾ ಹೊಸ ಗಡಿ ಕ್ಯಾತೆ ತೆಗೆದಿದೆ. ಆದರೆ ಮೇಲ್ನೋಟಕ್ಕೆ ಇದು ಭೂತಾನ್ ಜತೆಗಿನ ಚೀನಾ ವಿವಾವದವೆನಿಸಿದರೂ ಭಾರತದ ಅರುಣಾಚಲ ಪ್ರದೇಶಕ್ಕೆ ತಾಗಿಕೊಂಡಿರುವ ಭೂಮಿಯ ಬಗ್ಗೆ ಚೀನಾ ತಗಾದೆ ಎತ್ತಿರುವುದರಿಂದ ಇದು ಪರೋಕ್ಷವಾಗಿ ಭಾರತವನ್ನು ಕೆಣಕುವ ಪ್ರಯತ್ನ ಎಂದೇ ವಿಶ್ಲೇಷಿಸಲಾಗಿದೆ.

ಈ ಮೊದಲಿನಿಂದಲೂ ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದ ಮಂಡಿಸುತ್ತಿದೆ. ಇದೀಗ ಭೂತಾನ್ ಜತೆಗೆ ಚೀನಾ ಗಡಿ ವಿವಾದ ಮಾಡಿಕೊಂಡಿರುವುದೂ ಇದೇ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂಮಿಯ ಬಗ್ಗೆ. ಹೀಗಾಗಿ ಈ ವಿವಾದದ ಮೂಲಕ ಭಾರತವನ್ನು ಪರೋಕ್ಷವಾಗಿ ಚೀನಾ ಕೆಣಕುವ ಪ್ರಯತ್ನ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ