ಚೀನಾಕ್ಕೆ ಈಗ ಗಲ್ವಾನ್ ನದಿಯೇ ಪಾಠ ಕಲಿಸಲಿದೆ!

ಸೋಮವಾರ, 6 ಜುಲೈ 2020 (09:48 IST)
ನವದೆಹಲಿ: ಭಾರತದೊಂದಿಗೆ ಗಲ್ವಾನ್ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬಂದ ಚೀನಾಕ್ಕೆ ಈಗ ಗಲ್ವಾನ್ ನದಿಯೇ ತಕ್ಕ ಪಾಠ ಕಲಿಸಲಿದೆ.


ತಾಪಮಾನ ಏರಿಕೆಯಿಂದಾಗಿ ಗಲ್ವಾನ್ ನದಿಯಲ್ಲಿ ಹಿಮ ಕರಗಿ ಪ್ರವಾಹ ಸದೃಶ ವಾತಾವರಣವಿದೆ. ಹೀಗಾಗಿ ಗಲ್ವಾನ್ ನದಿಯ ತೀರದಲ್ಲಿ ಬೀಡುಬಿಟ್ಟಿರುವ ಚೀನಾ ಸೈನಿಕರು ಈಗ ಮುಳುಗಡೆಯ ಭೀತಿಯಲ್ಲಿದ್ದು, ಅನಿವಾರ್ಯವಾಗಿ ಜಾಗ ಖಾಲಿ ಮಾಡಬೇಕಿದೆ.

ಗಲ್ವಾನ್ ತೀರದಲ್ಲಿ ಚೀನಾ ಸೇನಾ ಪೋಸ್ಟ್ ನಿರ್ಮಿಸಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿತ್ತು. ಆದರೆ ಈಗ ಚೀನಾ ಡ್ರ್ಯಾಗನ್ ಗಳು ಅನಿವಾರ್ಯವಾಗಿ ಅಲ್ಲಿಂದ ಜಾಗ ಖಾಲಿ ಮಾಡಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ